ಬೆಂಗಳೂರು : ಮನೆಯಲ್ಲಿ ಕೇಕ್ ತಿಂದು 5 ವರ್ಷದ ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೆ.ಪಿ.ಅಗ್ರಹಾರದ ಭುವನೇಶ್ವರಿ ನಗರದಲ್ಲಿ ನಡೆದಿದೆ. ತಂದೆ ತಂದುಕೊಟ್ಟಿದ ಕೇಕ್ ತಿಂದು ಧೀರಜ್ (5) ಸಾವನ್ನಪ್ಪಿದ್ರೆ, ತಂದೆ ಬಾಲರಾಜ್, ತಾಯಿ ನಾಗಲಕ್ಷ್ಮಿ ಅಸ್ವಸ್ಥಗೊಂಡಿದ್ದಾರೆ.
ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರುವ ಬಾಲರಾಜ್ ನಿನ್ನೆ ಕೇಕ್ ತಂದು ಧೀರಜ್ಗೆ ಕೊಟ್ಟಿದ್ದಾರೆ. ಪೋಷಕರು ಮಗು ಧೀರಜ್ ಜೊತೆ ಒಟ್ಟಿಗೆ ಕುಳಿತು ಕೇಕ್ ತಿಂದಿದ್ದಾರೆ. ಬಳಿಕ ಫುಡ್ ಪಾಯಿಸ್ ಆಗಿ ದಿಢೀರ್ ಮೂವರು ಅಸ್ವಸ್ಥಗೊಂಡಿದ್ದಾರೆ.
ಇನ್ನು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮಗು ಅಸುನೀಗಿದ್ದು, ಆಸ್ಪತ್ರೆಯ ಐಸಿಯುನಲ್ಲಿ ತಂದೆ ಬಾಲರಾಜ್, ತಾಯಿ ನಾಗಲಕ್ಷ್ಮಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೇಕ್ ಎಲ್ಲಿಯದ್ದು ಅನ್ನೋದರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇನ್ನು ಇಬ್ಬರಿಗೂ ಪ್ರಜ್ಞೆ ಬಂದ ಬಳಿಕ ಘಟನೆ ಬಗ್ಗೆ ಪೊಲೀಸರು ಮಾಹಿತಿ ಪಡೆಯಲು ಕಾಯುತ್ತಿದ್ದಾರೆ.
ಇದನ್ನೂ ಓದಿ : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಹಂಗಾಮಿ ಅಧ್ಯಕ್ಷರಾಗಿ ಜಗನ್ನಾಥ ಶೇಘ್ ಜೀ ಆಯ್ಕೆ..!