ಬೆಂಗಳೂರು : ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಎನ್. ಸತೀಶ್ ಕುಮಾರ್ ಅವರನ್ನು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ ಮಾಡಿದ್ದಾರೆ.
ಇನ್ನು ಬಿ ಆರ್ ರವಿಕಾಂತೇಗೌಡ ಅವರನ್ನು ಐಜಿಪಿಯಾಗಿ ದಾವಣಗೆರೆ ಪೂರ್ವ ವಲಯ ಮತ್ತು ಬಿ ರಮೇಶ್ ಅವರನ್ನು DIGP & ಜಂಟಿ ಪೊಲೀಸ್ ಆಯುಕ್ತರಾಗಿ ಬೆಂಗಳೂರು ಪೂರ್ವ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಹುದ್ದೆಯನ್ನ ಸರ್ಕಾರ ಡೌನ್ ಗ್ರೇಡ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ : 4 ಚೀಲಗಳಲ್ಲಿ ತುಂಬಿಸಿದ್ರು 12 ಕೋಟಿ ಕ್ಯಾಶ್.. ಮಂಗಳೂರು ಬ್ಯಾಂಕ್ ದರೋಡೆಕೋರರ ಕೈಚಳಕ CCTVಯಲ್ಲಿ ಸೆರೆ..!
Post Views: 300