Download Our App

Follow us

Home » ಕ್ರೀಡೆ » ಪ್ಯಾರಿಸ್ ಒಲಿಂಪಿಕ್ಸ್​ಗೆ ಇಂದು ಅದ್ದೂರಿ ಚಾಲನೆ – ವಿಶೇಷ ಡೂಡಲ್ ಮೂಲಕ ಗೂಗಲ್‌ ಗೌರವ..!

ಪ್ಯಾರಿಸ್ ಒಲಿಂಪಿಕ್ಸ್​ಗೆ ಇಂದು ಅದ್ದೂರಿ ಚಾಲನೆ – ವಿಶೇಷ ಡೂಡಲ್ ಮೂಲಕ ಗೂಗಲ್‌ ಗೌರವ..!

ಪ್ಯಾರಿಸ್ : 33ನೇ ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಪ್ಯಾರಿಸ್ ​ಸಜ್ಜಾಗಿ ನಿಂತಿದ್ದು, 17 ದಿನಗಳ ಕಾಲ ನಡೆಯಲಿರುವ “ಪ್ಯಾರಿಸ್ ಒಲಿಂಪಿಕ್ಸ್”​ಗೆ ಇಂದು (ಜುಲೈ 26) ವರ್ಣರಂಜಿತ ಚಾಲನೆ ಸಿಗಲಿದೆ. ಇಂದು ರಾತ್ರಿ 11 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ಇದೀಗ ಈ ಬಹುನಿರೀಕ್ಷಿತ ಕ್ರೀಡಾ ಹಬ್ಬವನ್ನು ಗೂಗಲ್‌ ಡೂಡಲ್‌ ಸಂಭ್ರಮಿಸಿದ್ದು, ವಿಶೇಷ ಡೂಡಲ್​​​ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ಗೆ ಗೂಗಲ್​​​ ಗೌರವ ನೀಡಿದೆ.

ಸೀನ್​ ನದಿಯ ಮೇಲೆ ಒಲಿಂಪಿಕ್ಸ್ ಕ್ರೀಡಾಕೂಟದ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅದರಂತೆ ಸರ್ಚ ಇಂಜಿನ್​ ‘ಗೂಗಲ್’​​ ​​​ನದಿಯ ವಿನ್ಯಾಸದಲ್ಲಿ ಡೂಡಲ್​​ ಅನ್ನು ತಯಾರಿಸಿದೆ. ಡೂಡಲ್​​ ಮೇಲೆ ಕ್ಲಿಕ್​ ಮಾಡಿದಾಗ, ಪ್ಯಾರಿಸ್ ಒಲಿಂಪಿಕ್ಸ್​ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನಿಮಗೆ ಸಿಗುವಂತೆ ಮುಖಪುಟವನ್ನು ವಿನ್ಯಾಸಗೊಳಿಸಿದೆ.

ಈ ಬಾರಿಯ ಒಲಿಂಪಿಕ್ಸ್​ನಲ್ಲಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಈ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಕಣಕ್ಕಿಳಿಯುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಪ್ಯಾರಿಸ್ ಕ್ರೀಡಾಕೂಟವನ್ನು ಜಿಯೋ ಆ್ಯಪ್ ಮೂಲಕ ಉಚಿತವಾಗಿ ವೀಕ್ಷಿಸಬಹುದು.

ಇದನ್ನೂ ಓದಿ : ಇನ್‌ಸ್ಟಾಗ್ರಾಮ್‌ನಲ್ಲಿ ಕಿವುಡರ ಬಗ್ಗೆ ಅವಮಾನಕರ ರೀಲ್ಸ್​ ಮಾಡಿದ ಇಬ್ಬರು ಅರೆಸ್ಟ್​..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here