Download Our App

Follow us

Home » ರಾಜ್ಯ » ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದ ವೋಟಿಂಗ್ – ಎಲ್ಲೆಲ್ಲಿ ಮತದಾನ? ಸಮಯ ಏನು? ಇಲ್ಲಿದೆ ವಿವರ..!

ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದ ವೋಟಿಂಗ್ – ಎಲ್ಲೆಲ್ಲಿ ಮತದಾನ? ಸಮಯ ಏನು? ಇಲ್ಲಿದೆ ವಿವರ..!

ದೇಶದಲ್ಲಿ 3ನೇ ಹಂತದ ಹಾಗೂ ಕರ್ನಾಟಕದ 2ನೇ ಹಂತದ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಉತ್ತರ ಕರ್ನಾಟಕದ ಒಟ್ಟು 14 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದ್ದು ಮತದಾರರು ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ಮಾಡಬಹುದು.

ರಾಜ್ಯದಲ್ಲಿಂದು 14 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ವೋಟಿಂಗ್ ನಡೆಯುತ್ತಿರುವ ಕಾರಣ ಎಲ್ಲ ಮತಗಟ್ಟೆಗಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿಯೇ 1 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದೀಗ ಮೂರನೇ ಹಂತದಲ್ಲಿ 12 ರಾಜ್ಯಗಳ 92 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಒಟ್ಟು 1300 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ ಸುಮಾರು 120 ಮಹಿಳೆಯರಾಗಿದ್ದಾರೆ.

ಕರ್ನಾಟಕದ ಯಾವೆಲ್ಲ ಕ್ಷೇತ್ರಗಳಲ್ಲಿ ಮತದಾನ?

ಬಾಗಲಕೋಟೆ

ಬೆಳಗಾವಿ

ಬಳ್ಳಾರಿ

ಬೀದರ್

ವಿಜಯಪುರ

ಚಿಕ್ಕೋಡಿ

ದಾವಣಗೆರೆ

ಧಾರವಾಡ

ಹಾವೇರಿ

ಕೊಪ್ಪಳ

ಗುಲ್ಬರ್ಗ

ರಾಯಚೂರು

ಶಿವಮೊಗ್ಗ

ಉತ್ತರ ಕನ್ನಡ

ಮತದಾನದ ಸಮಯ : ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಸಂಜೆ 6 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ ಮತದಾನಕ್ಕೆ  ಅವಕಾಶ ದೊರೆಯಲಿದೆ.

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಶೇಕಡಾ 69.56 ರಷ್ಟು ಮತದಾನವಾಗಿತ್ತು. ಮಂಡ್ಯದಲ್ಲಿ (ಶೇ 81.67), ಕೋಲಾರದಲ್ಲಿ (ಶೇ 78.27) ಮತ್ತು ತುಮಕೂರಿನಲ್ಲಿ (ಶೇ 78.05 ರಷ್ಟು) ಅತಿ ಹೆಚ್ಚು ಮತದಾನವಾಗಿತ್ತು. ಬೆಂಗಳೂರು ಸೆಟ್ರಲ್​​​ನಲ್ಲಿ ಶೇ 54.06, ಬೆಂಗಳೂರು ದಕ್ಷಿಣದಲ್ಲಿ ಶೇ 53.17, ಬೆಂಗಳೂರು ಉತ್ತರದಲ್ಲಿ ಶೇ 54.45 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಶೇ 68.30ರಷ್ಟು ಮತದಾನವಾಗಿತ್ತು.

3ನೇ ಹಂತದಲ್ಲಿ ಯಾವ ರಾಜ್ಯಗಳ ಎಷ್ಟು ಸ್ಥಾನಗಳಿಗೆ ಚುನಾವಣೆ?

ಮೂರನೇ ಹಂತದಲ್ಲಿ ಗುಜರಾತ್​​ನ 25, ಕರ್ನಾಟಕದ 14, ಮಹಾರಾಷ್ಟ್ರದ 11, ಮಧ್ಯಪ್ರದೇಶದ 8, ಛತ್ತೀಸ್‌ಗಢದ 7, ಬಿಹಾರದ 5, ಅಸ್ಸಾಂನ 4, ಉತ್ತರ ಪ್ರದೇಶದ 10, ಪಶ್ಚಿಮ ಬಂಗಾಳದ 4, ಗೋವಾದ 2, ದಾದರ್-ನಗರ ಹವೇಲಿಯ 2 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ : IPS ಅಧಿಕಾರಿ ಮಾಲಿನಿ ಕೃಷ್ಣಮೂರ್ತಿಯವರಿಗೆ ಡಿಜಿಪಿಯಾಗಿ ಭಡ್ತಿ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here