Download Our App

Follow us

Home » ಸಿನಿಮಾ » “ಲೇಡಿಸ್ ಬಾರ್” ಚಿತ್ರಕ್ಕೆ 25ನೇ ದಿನದ ಸಂಭ್ರಮ..!

“ಲೇಡಿಸ್ ಬಾರ್” ಚಿತ್ರಕ್ಕೆ 25ನೇ ದಿನದ ಸಂಭ್ರಮ..!

ಡಿಎಂಸಿ ಪ್ರೊಡಕ್ಷನ್ ರವರ ಚೊಚ್ಚಲ ಕಾಣಿಕೆ. ಟಿ ಎಂ.ಸೋಮರಾಜು ರವರ ನಿರ್ಮಾಣದ, ಮುತ್ತು ಎ ಎನ್ ನಿರ್ದೇಶನ ಮಾಡಿರುವ “ಲೇಡಿಸ್ ಬಾರ್” ಚಿತ್ರಕ್ಕೆ 25ನೇ ದಿನದ ಸಂಭ್ರಮ. ಈ ಸಂತಸವನ್ನು ಹಂಚಿಕೊಳ್ಳಲು ನಿರ್ಮಾಪಕರು ಸುಂದರ ಸಮಾರಂಭವನ್ನು ಆಯೋಜಿಸಿದ್ದರು. ಹಿರಿಯ ನಟ ಅಶೋಕ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಚಿತ್ರತಂಡದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಫೆಬ್ರವರಿ 16ರಂದು ಲೇಡಿಸ್ ಬಾರ್ ಚಲನಚಿತ್ರ ಬಿಡುಗಡೆಗೊಂಡಿದ್ದು, ಚಿಕ್ಕ ಚಿತ್ರ ತಂಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು ಮಾಡಿದ ಚಿತ್ರವೇ “ಲೇಡಿಸ್ ಬಾರ್”. ಈಗ ಸಿನಿಮಾ ಮಾಡಿ ರಿಲೀಸ್ ಮಾಡುವುದೇ ಎಲ್ಲಿಲ್ಲದ ಕಷ್ಟ ಇಂಥ ಸಮಯದಲ್ಲಿ ಹಾಗೂ ಸಾಲು ಸಾಲು ಚಿತ್ರಗಳು ತೆರೆ ಕಾಣುತ್ತಿದ್ದು, ಈ ಪೈಪೋಟಿಗಳ ಮಧ್ಯೆ ಸೋಲು ಗೆಲುವಿನ ಲೆಕ್ಕಾಚಾರ ಇದ್ದ ಚಿತ್ರ ತಂಡ, ಒಂದೊಳ್ಳೆ ಕನ್ನಡ ಸಿನಿಮಾ ಮಾಡಿದಾಗ ಯಾವ ಕಾರಣಕ್ಕೂ ಸಿನಿಪ್ರೇಕ್ಷಕರು ಕೈ ಬಿಡುವುದಿಲ್ಲ ಎಂಬುದನ್ನು ಪ್ರೂವ್ ಮಾಡಿದ್ದಾರೆ.

ಸಿನಿಪ್ರೇಕ್ಷಕರನ್ನು ರಂಜಿಸುವುದರಲ್ಲಿ ಲೇಡೀಸ್ ಬಾರ್ ಚಿತ್ರದ ನಿರ್ದೇಶಕ ಮುತ್ತು ಗೆದ್ದಿದ್ದಾರೆ ಎಂದು ಹೇಳಬಹುದು . ನಿರ್ಮಾಣದೊಂದಿಗೆ ನಟನೆಯಲ್ಲಿ ಪ್ರೇಕ್ಷಕನ ಹೆಗ್ಗಳಿಕೆಯ ಪಾತ್ರಧಾರಿಯಾದ ನಿರ್ಮಾಪಕ ಟಿ ಎಂ ಸೋಮರಾಜ್ ಅವರ ಅಭಿನಯ ಹಾಗೂ ಹರ್ಷ ಕೋಗೋಡ್ ರವರ ಸಂಗೀತ ಚಿತ್ರದ ಗೆಲುವಿನ ಒಂದು ಅಂಗವಾಗಿದೆ.

ಹರೀಶ್ ರಾಜ್, ಕೆಂಪೇಗೌಡ, ಗಣೇಶ್ ರಾವ್ ಕೇಸರ್ ಕರ್ , ಮೀನಾಕ್ಷಿ ಹಾಗೂ ಎಲ್ಲಾ ಕಲಾವಿದರು ನಟನೆಯಲ್ಲಿ ಸೈ ಏನಸಿಕೊಂಡಿದ್ದಾರೆ. ಸುಮಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ ವೀನಸ್ ಮೂರ್ತಿ ಅವರ ಕ್ಯಾಮೆರಾ ಕೈಚಳಕ ಕೂಡ ವರ್ಕೌಟ್ ಆಗಿದೆ. 25 ನೇ ದಿನದ ಸಂಭ್ರಮದಲ್ಲಿರುವ ಚಿತ್ರತಂಡಕ್ಕೆ ಒಳ್ಳೆದಾಗಲಿ. ಹೀಗೆ ಕನ್ನಡ ಚಿತ್ರರಂಗಕ್ಕೆ ಒಳ್ಳೆ ಒಳ್ಳೆ ಸಿನಿಮಾಗಳು ಕೊಡಲಿ ಎಂದು ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಹಾರೈಸಿದರು.

ಇದನ್ನೂ ಓದಿ : ಖರ್ಗೆ ತವರಿನಿಂದಲೇ ಲೋಕಸಭೆ ಚುನಾವಣೆಗೆ ನಮೋ‌ ಶಂಕನಾದ – ಇಂದು ಕಲಬುರಗಿಯಲ್ಲಿ ಮೋದಿ ಅಬ್ಬರದ ಪ್ರಚಾರಕ್ಕೆ ಚಾಲನೆ..! 

Leave a Comment

DG Ad

RELATED LATEST NEWS

Top Headlines

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಮರು ಆಯ್ಕೆ..!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಅವರು ಮರು ಆಯ್ಕೆಯಾಗಿದ್ದಾರೆ. 2024-29ನೇ ಅವಧಿಯ ಅಧ್ಯಕ್ಷ ಹಾಗೂ ರಾಜ್ಯ ಖಜಾಂಚಿ ಸ್ಥಾನಕ್ಕೆ ಇಂದು ಕಬ್ಬನ್‌ ಪಾರ್ಕ್‌ನ

Live Cricket

Add Your Heading Text Here