10 ಕೋಟಿ ವಂಚನೆ – ಖ್ಯಾತ ಗಾಯಕಿ ಮಂಗ್ಲಿ ವಿರುದ್ಧ ಕೇಸ್ ದಾಖಲು!

ಬೆಂಗಳೂರು : 10 ಕೋಟಿ ವಂಚನೆ ಆರೋಪದಡಿ ಖ್ಯಾತ ಗಾಯಕಿ ಮಂಗ್ಲಿ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸುಮಾರು 150 ಮಂದಿಗೆ ಮಂಗ್ಲಿ ಅಂಡ್ ಗ್ಯಾಂಗ್ ಹೆಚ್ಚಿನ ಬಡ್ಡಿ ಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡಿದೆ. ನಿಗದಪಡಿಸಿದ ಸಮಯ ಕಳೆದರೂ ಲಾಭ ನೀಡಿಲ್ಲ, ಅಸಲನ್ನು ಕೂಡ ಕೊಟ್ಟಿಲ್ಲ. ಹಾಗಾಗಿ ಜನರು ವಾಪಸ್ ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ.

ರಿಯಲ್​ ಎಸ್ಟೇಟ್, ಟ್ರೇಡಿಂಗ್, ಇಂಪೋರ್ಟ್-ಎಕ್ಸ್ಪೋರ್ಟ್​ಗಳಲ್ಲಿ ಹೂಡಿಕೆ ಮಾಡಿ ಅಧಿಕ ದುಡ್ಡು ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಕೀಲರೊಬ್ಬರು ದೂರು ನೀಡಿದ್ದು, ಹೈದರಾಬಾದ್​ನ ಪೊಲೀಸ್ ಠಾಣೆಯಲ್ಲಿ ಖ್ಯಾತ ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಯಾವುದೇ ಕ್ಷಣದಲ್ಲಿ ರಾಬರ್ಟ್ ಚಿತ್ರದ ಗಾಯಕಿ ಅರೆಸ್ಟ್ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಮತ್ತೆ ಒಂದಾದ ‘ಬೆಲ್ ಬಾಟಂ’ ಜೋಡಿ – ‘ಹುಬ್ಬಳ್ಳಿ ಹಂಟರ್ಸ್’ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾಥ್!

Btv Kannada
Author: Btv Kannada

Leave a Comment

Read More

Read More