ಕೆಡಿ ಸಿನಿಮಾದ “ನುಗ್ಗಿ ಹೊಡಿ” ಸಾಂಗ್ ರಿಲೀಸ್ – ಮಾಸ್ ಪ್ರೇಕ್ಷಕರ ಮನಗೆದ್ದ ರೌಡಿಸಂ ಹಾಡು!

ಜೋಗಿ ಪ್ರೇಮ್‌ ನಿರ್ದೇಶನದ ಬಹುನಿರೀಕ್ಷಿತ ʻಕೆಡಿʼ ಸಿನಿಮಾದ ರೌಡಿಸಂ ಹಾಡು “ನುಗ್ಗಿ ಹೊಡಿ” ರಿಲೀಸ್ ಆಗಿದೆ. ಈ ಹಾಡಿನ ಲಿರಿಕ್ಸ್ ಇಂಟ್ರಸ್ಟಿಂಗ್ ಆಗಿದ್ದು, ರೌಡಿಸಂಗೆ ಗುರವೇ ಇಲ್ಲ.. ಮಚ್ಚಿಗೆ ಕರುಣೆ ಇಲ್ಲ ಅಂತಲೇ ಸಾಂಗ್ ಸಾಗುತ್ತದೆ. ಚಿತ್ರದ ಪಕ್ಕಾ ರೌಡಿಸಂ ಸ್ಟೈಲ್‌ನ “ನುಗ್ಗಿ ಹೊಡಿ” ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಈ ಹಾಡು ರೌಡಿಸಂ ಲೋಕದ ಕಥೆಯನ್ನು ಬಿಚ್ಚಿಡುತ್ತಿದ್ದು, ಮಾಸ್ ಪ್ರೇಕ್ಷಕರಿಗೆ ಈ ಹಾಡು ಸಖತ್ ಇಷ್ಟವಾಗುತ್ತಿದೆ. ‘ಕೆಡಿ’ ಚಿತ್ರವು ಬಹುಭಾಷೆಯಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ “ನುಗ್ಗಿ ಹೊಡಿ” ಹಾಡನ್ನು ಕೂಡ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಾಂಗ್ ರಿಲೀಸ್ ಆಗಿದೆ.

ಕೆಡಿ ಚಿತ್ರಕ್ಕೆ ಸಂಗೀತವೂ ಒಂದು ಶಕ್ತಿನೇ ಆಗಿದೆ. ಜೋಗಿ ಪ್ರೇಮ್ ಹಾಗೂ ಅರ್ಜುನ್ ಜನ್ಯ ಜೊತೆಗೂಡಿಯೇ ಈ ಚಿತ್ರಕ್ಕೆ ಒಳ್ಳೆ ಹಾಡುಗಳನ್ನ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಇದನ್ನೂ ಓದಿ : ರಾಜ್ಯದ ಹಲವೆಡೆ ಇಂದು ಭಾರೀ ಮಳೆ ಸಾಧ್ಯತೆ – ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ!

Btv Kannada
Author: Btv Kannada

Leave a Comment

Read More

Read More