‘ಮದರ್‌ ಪ್ರಾಮಿಸ್’ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ – RCB ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ ಡಾಲಿ ಪಿಕ್ಚರ್ಸ್!

ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಮದರ್‌ ಪ್ರಾಮಿಸ್’ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. RCB ಬಗ್ಗೆ ಇರುವ ಹಾಡು ಇದಾಗಿದ್ದು RCB ಅಭಿಮಾನಿಗಳ ಹೃದಯ ಗೆದ್ದಿದೆ. ತಮ್ಮದೇ ಸ್ನೇಹಿತರ ಬಳಗವೆಲ್ಲಾ ಸೇರಿಸಿಕೊಂಡು ಸಿನಿಮಾ ಮಾಡಿದ್ದು, ಡಾಲಿ ಗೆಳೆಯ ಪೂರ್ಣ ಮೈಸೂರು ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ವಿಶೇಷ. ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಡಾಲಿ ಗೆಳೆಯ ಹರ್ಷ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಇಂಟ್ರೆಸ್ಟಿಂಗ್‌ ಪೋಸ್ಟರ್ ಬಿಡುಗಡೆ ಮಾಡಿದ್ದರು. ಮದರ್‌ ಪ್ರಾಮಿಸ್‌ ಎನ್ನುವ ಎಮೋಷನಲ್‌ ಟೈಟಲ್‌ ಇರುವ ಈ ಸಿನಿಮಾದಿಂದ ಬಂದಿರುವ ಮೊದಲ ಹಾಡನ್ನು ಗುರುಕಿರಣ್ ಅವರ ಧ್ವನಿಯಲ್ಲಿ ಮೂಡಿಬಂದಿದೆ. ಅನೇಕ ಸಮಯದ ನಂತರ ಖ್ಯಾತ ಗಾಯಕ ಗುರುಕಿರಣ್ ಅವರು ಧ್ವನಿನೀಡಿರುವುದು ವಿಶೇಷ. ಪೂರ್ಣ ಮೈಸೂರು ಮತ್ತು ಗೆಳೆಯರ ಜೊತೆ ಡಾಲಿ ಕೂಡ ಹೆಜ್ಜೆ ಹಾಕಿದ್ದಾರೆ. ವೈಟ್ ಕಲರ್ ಸೂಟ್ ಧರಿಸಿ ಸ್ಟೈಲಿಶ್ ಎಂಟ್ರಿ ಕೊಡುವ ಡಾಲಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.

ನವನೀತ್ ಶ್ಯಾಮ್ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದ್ದು ನಿರ್ದೇಶಕ ಶಶಾಂಕ್ ಸೋಘಲ್ ಈ ಹಾಡನ್ನು ಬರೆದಿದ್ದಾರೆ.

‘ಮದರ್ ಪ್ರಾಮಿಸ್’ ಕಾಮಿಡಿ ಹಾಗೂ ಥ್ರಿಲ್ಲಿಂಗ್ ಸಿನಿಮಾ. ಈ ಚಿತ್ರದಲ್ಲಿ ಡಾಲಿ ಧನಂಜಯ ಸೇರಿದಂತೆ ನಟ ನಾಗಭೂಷಣ್‌ , ಹಿರಿಯ ನಟಿ ವಿನಯಪ್ರಸಾದ್‌, ಗೀತಾ, ಗುರುದತ್‌ ಇನ್ನು ಅನೇಕರು ನಟಿಸಿದ್ದಾರೆ. ಈ ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಪೂರ್ಣ ವಹಿಸಿಕೊಂಡಿದ್ದು ‘ಡೇರ್‌ ಡೆವಿಲ್‌ ಮುಸ್ತಾಫ’ ಸಿನಿಮಾ ನಿರ್ದೇಶಕ ಶಶಾಂಕ್‌ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದಾರೆ. ರಾಹುಲ್‌ ರಾಯ್‌ ಕ್ಯಾಮೆರಾ, ನವನೀತ್‌ ಶ್ಯಾಮ್‌ ಸಂಗೀತಾ ನಿರ್ದೇಶನ ಈ ಸಿನಿಮಾಗಿದೆ.

Btv Kannada
Author: Btv Kannada

Leave a Comment

Read More