ಬೆಂಗಳೂರು : ಇತ್ತೀಚೆಗೆ ಒಂದು ವಿಡಿಯೋ ಭಾರೀ ವೈರಲ್ ಆಗಿತ್ತು. ಅದರಲ್ಲಿ ಓರ್ವ ವ್ಯಕ್ತಿ ಗಂಟೆಗಟ್ಟಲ್ಲೇ ನಿಂತಲ್ಲೇ ನಿಂತಿದ್ದ. ಇದನ್ನು ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ ಕಾಲಿಟ್ಟಿದೆ ಎಂದು ವೈರಲ್ ಮಾಡಲಾಗಿತ್ತು. ಇದೀಗ ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ ಕೊಟ್ಟಿದ್ದಾರೆ.
ವಿಡಿಯೋದಲ್ಲಿರೋ ವ್ಯಕ್ತಿಯನ್ನ ಪೊಲೀಸರು ಪತ್ತೆ ಮಾಡಿದ್ದಾರೆ, ಆತ ಅನಾರೋಗ್ಯ ವಿಚಾರಕ್ಕೆ ಮೆಡಿಸನ್ ತಗೊಂಡಿದ್ದಾನೆ. ಆತನ ಮೆಡಿಕಲ್ ಮಾಡಿಸಿದ್ದು ಮೆಡಿಕಲ್ನಲ್ಲಿ ಡ್ರಗ್ ಪತ್ತೆಯಾಗಿಲ್ಲ. ಈ ರೀತಿ ವಿಡಿಯೋ ಅಪ್ಲೋಡ್ ಮಾಡೋ ಮುನ್ನ ಯೋಚನೆ ಮಾಡಿ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಮೊದಲು ಪೊಲೀಸರಿಗೆ ತಿಳಿಸಿ, ಈ ರೀತಿ ಸುಖಾ ಸುಮ್ಮನೆ ವೈರಲ್ ಮಾಡೋದು ಸರಿಯಲ್ಲ. ಇದು ಸಿಟಿಗೆ ಮತ್ತು ಒಬ್ಬ ವ್ಯಕ್ತಿಗೆ ಕೆಟ್ಟ ಹೆಸರು ತರುವ ವಿಚಾರ ಆಗಿದೆ, ಈ ವಿಡಿಯೋ ವೈರಲ್ ಮಾಡಿರೋ ವ್ಯಕ್ತಿ ಪತ್ತೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಪೊಲೀಸರು ಡ್ರಗ್ ವಿಚಾರವಾಗಿ ಕೆಲಸ ಮಾಡ್ತಿದ್ದಾರೆ. ಆ ವ್ಯಕ್ತಿ ಇಲ್ಲಿಯವರು ಅಲ್ಲ ಅವರು ಮದ್ಯಪಾನ ಮಾಡಿ ಮೆಡಿಸಿನ್ ತಗೊಂಡಿದ್ದಕ್ಕೆ ಈ ರೀತಿ ಆಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ಡ್ರಗ್ ಬಗ್ಗೆ ಝೀರೋ ಟಾರಲೆನ್ಸ್ ಇದೆ, ಜನ ಆತಂಕ ಪಡೋದು ಬೇಡ. ಸಿಟಿ ಬಗ್ಗೆ ಅಪಪ್ರಚಾರ ಮಾಡಿದವ ಮೇಲೆ ಕಾನೂನು ಕ್ರಮ ಆಗಲಿದೆ, ವಿಡಿಯೋ ಶೇರ್ ಮಾಡಿದವರಿಗೂ ನೋಟಿಸ್ ಜಾರಿಯಾಗಲಿದೆ. ಈ ವಿಡಿಯೋ ಶೇರ್ ಮಾಡಿರೋರು ತಮ್ಮ ಅಕೌಂಟ್ಗಳಿಂದ ಡಿಲೀಟ್ ಮಾಡಬೇಕು ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.
ಇದನ್ನೂ ಓದಿ : ವಿಂಗ್ಸ್‌ಪ್ಯಾನ್ ಮೋಷನ್ ಪಿಕ್ಚರ್ಸ್ LLP ನಿರ್ಮಾಣದ “ಎರೆಯ” ಚಿತ್ರಕ್ಕೆ ಸಿದ್ಧತೆ!








