ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ಸ್ – ಕಣ್ಣೀರಿಟ್ಟ ಆ್ಯಂಕರ್ ಅನುಶ್ರೀ!

ಆ್ಯಂಕರ್ ಅನುಶ್ರೀ ತಮ್ಮ ನಿರೂಪನೆಯ ಮೂಲಕವೇ ಕರ್ನಾಟಕದ ಮನೆ ಮಾತಾಗಿದ್ದಾರೆ. ಪಟಪಟ ಎಂದು ಮಾತನಾಡುತ್ತಾ, ವೇದಿಕೆಯ ಮೇಲೆ ಆ ಸನ್ನಿವೇಶಕ್ಕೆ ತಕ್ಕಂತೆ ಆ ವಿಷಯವನ್ನು ಹೇಳುತ್ತಾ, ಸದಾ ಎಲ್ಲರನ್ನೂ ನಕ್ಕು ನಗಿಸೋರು ಎಂದರೆ ಅವರು ಆ್ಯಂಕರ್​ ಅನುಶ್ರೀ. ಅನುಶ್ರೀ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಹೇಳಿಕೊಂಡಿರುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಯೂಟ್ಯೂಬ್ ಚಾನೆಲ್​ವೊಂದರ ಸಂದರ್ಶನದಲ್ಲಿ ಆ್ಯಂಕರ್ ಅನುಶ್ರೀ ಅನೇಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ಈ ಶೋನಲ್ಲಿ ಹೆಚ್ಚಾಗಿ ತಮಾಷೆ ವಿಚಾರಗಳನ್ನೇ ಮಾತನಾಡುವುದು ಹೆಚ್ಚು. ಈ ಬಾರಿ ಅನುಶ್ರೀ ಅನೇಕ ಮುಕ್ತವಾಗಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿಗಳಿಗೆ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಕೆಟ್ಟ ಕಮೆಂಟ್​ಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದು, ಈ ಬಗ್ಗೆ ಮಾತನಾಡುತ್ತಾ ಅನುಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಕೋಟಿ ರೂಪಾಯಿ ಮನೆ ಖರೀದಿ ಮಾಡಿದರೆ ಎಲ್ಲರೂ ಅವರನ್ನು ಮೆಚ್ಚುತ್ತಾರೆ. ಆದರೆ ಅನುಶ್ರೀ ಮನೆ ತೆಗೆದುಕೊಂಡರೆ ಅದನ್ನು ಸಾಧನೆ ಎಂದು ಪರಿಗಣಿಸುವ ಬದಲು ಬೇರೆ ರೀತಿಯ ಮಾತುಗಳನ್ನು ಮಾಡುತ್ತಾರೆ. ಈ ಪೈಕಿ ಬಹಳಷ್ಟು ಟೀಕೆಗಳು ಅರ್ಥವಿಲ್ಲದವು, ಮತ್ತು ಅವು ಮಹಿಳೆಯರನ್ನೇ ಗುರಿಯಾಗಿಸುವ ಪ್ರಯತ್ನವಾಗಿರುತ್ತದೆ ಎಂದು ಹೇಳಿದರು.

ಇನ್ನೂ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಾ ಫಿಸಿಕಲ್ ರೇಪ್ ಮಾತ್ರವಲ್ಲ, ಮೆಂಟಲ್ ರೇಪ್ ಕೂಡ ಇರುತ್ತದೆ. ಕಿತ್ತು ತಿನ್ನುವಷ್ಟು ಮಾತುಗಳು. ಕೆಲವರು ಸೈಕೋಪಾಥ್‌ಗಳು ಇರ್ತಾರೆ, ಬಹಳಷ್ಟು ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಹಾಕಿದ್ದಾರೆ. ನನ್ನ ಲೈಫ್‌ನಲ್ಲಿ ಅಷ್ಟು ಕಷ್ಟದಲ್ಲಿದ್ದಾಗಲೂ ಕೂಡ ನಾವು ಡಿಪ್ರೆಷನ್‌ಗೆ ಹೋಗ್ತೀವಿ ಅಂತ ಯಾರೂ ಅಂದುಕೊಂಡಿರಲಿಲ್ಲ ಎಂದು ಹೇಳುತ್ತಾ ಅನುಶ್ರೀ ಕಣ್ಣೀರಿಟ್ಟಿದ್ದಾರೆ.

Btv Kannada
Author: Btv Kannada

Leave a Comment

Read More

Read More