ಮಂಡ್ಯ : ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗೃಹ ಬಳಕೆ LPG ಸಿಲಿಂಡರ್ ಅಭಾವ ತಾರಕಕ್ಕೇರಿದೆ. ಸಕಾಲಕ್ಕೆ ಗ್ಯಾಸ್ ಸಿಗದೆ ಜನರು ಹೈರಾಣಾಗಿದ್ದು, ಇಂದು ಪಟ್ಟಣದ S.R. ಇಂಡೇನ್ ಗ್ಯಾಸ್ ಏಜೆನ್ಸಿ ಕಚೇರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆಯಿಂದ ತಿಂಡಿ, ಊಟ ಬಿಟ್ಟು ಗ್ರಾಹಕರು ಸಿಲಿಂಡರ್ಗಾಗಿ ಕಚೇರಿ ಮುಂದೆ ಕ್ಯೂ ನಿಂತಿದ್ದರು. ಗಂಟೆಗಟ್ಟಲೆ ಕಾದರೂ ಗ್ಯಾಸ್ ಸಿಗದಿದ್ದಾಗ ತಾಳ್ಮೆ ಕಳೆದುಕೊಂಡ ಸಾರ್ವಜನಿಕರು ಏಜೆನ್ಸಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು. ಗ್ರಾಹಕರು ಬುಕ್ ಮಾಡಿದ ಸಿಲಿಂಡರ್ಗಳನ್ನು ಏಜೆನ್ಸಿಯವರು ಹಣದ ಆಸೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಾಗಮಂಗಲ ಪಟ್ಟಣದ S.R.ಇಂಡೇನ್ ಗ್ಯಾಸ್ ಏಜೆನ್ಸಿ ಕಳ್ಳಾಟ ಆಡುತ್ತಿದ್ದು, ಜನರಿಗೆ ಸಿಲಿಂಡರ್ ಡಿಲಿವರ್ ಎಂದು ಮೆಸೇಜ್ ಬಂದರೂ ಸಿಲಿಂಡರ್ ಕೊಡದೆ ವಂಚನೆ ಮಾಡ್ತಿದ್ದಾರೆ. ಗ್ಯಾಸ್ ಸಿಗದೆ ಕಚೇರಿಯಲ್ಲಿ ಗೃಹಣಿಯರ ಕಣ್ಣೀರು ಹಾಕ್ತಿದ್ದು, ಗ್ಯಾಸ್ ಏಜೆನ್ಸಿ ಜನರನ್ನು ಸಮಾಧಾನ ಮಾಡಲು ಮುಂದಾಗಿದೆ.
ಇದನ್ನೂ ಓದಿ : ಜನಗಣತಿ ಕಾರ್ಯಕ್ಕೆ ಮಾನವ ಹಕ್ಕು ಆಯೋಗದ ಸಿಬ್ಬಂದಿ ನಿಯೋಜನೆ – ಕ್ರಮಕ್ಕೆ ದಿನೇಶ್ ಕಲ್ಲಹಳ್ಳಿ ಮುಖ್ಯ ಕಾರ್ಯದರ್ಶಿಗೆ ಒತ್ತಾಯ!









