ಜನಗಣತಿ ಕಾರ್ಯಕ್ಕೆ ಮಾನವ ಹಕ್ಕು ಆಯೋಗದ ಸಿಬ್ಬಂದಿ ನಿಯೋಜನೆ – ಪೊಲೀಸರಿಗೆ ಹಬ್ಬ?

ಬೆಂಗಳೂರು : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮಾನವ ಹಕ್ಕು ಆಯೋಗದ ಪಾತ್ರ ಅತ್ಯಂತ ದೊಡ್ಡದು. ಆದರೆ ಇದೀಗ ಆಯೋಗದ ಬಹುತೇಕ ಎಲ್ಲಾ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವುದರಿಂದ, ಆಯೋಗವು ಕಾರ್ಯನಿರ್ವಹಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಈ ಬೆಳವಣಿಗೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರಿಗೆ ಒಂದು ತಿಂಗಳು ಹಬ್ಬ ಎಂಬ ಮಾತುಗಳು ಕೇಳಿಬರುತ್ತಿವೆ.

ಮಾನವ ಹಕ್ಕು ಆಯೋಗವು ಸಿವಿಲ್ ನ್ಯಾಯಾಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವತಂತ್ರ ಸಂಸ್ಥೆ. ಪೊಲೀಸ್ ಠಾಣೆಗಳಲ್ಲಿ ಅಕ್ರಮ ಬಂಧನ, ದೌರ್ಜನ್ಯ ಅಥವಾ ಅಧಿಕಾರಿಗಳ ಅತಿರೇಕದ ವರ್ತನೆ ಕಂಡುಬಂದಲ್ಲಿ ತಕ್ಷಣವೇ ದಾಳಿ ಮಾಡುವ ಮತ್ತು ಕ್ರಮ ಕೈಗೊಳ್ಳುವ ಅಧಿಕಾರ ಈ ಆಯೋಗಕ್ಕಿದೆ. ಆದರೆ ಇದೀಗ ಕೇವಲ ಮೂವರು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಿಬ್ಬಂದಿಯನ್ನು ಜನಗಣತಿ ಕೆಲಸಕ್ಕೆ ಬಿಟ್ಟುಕೊಡಲಾಗಿದೆ.

ಆಯೋಗದ ದೈನಂದಿನ ಕಾರ್ಯಕಲಾಪಗಳಿಗೆ ಮತ್ತು ಗಂಭೀರ ದೂರುಗಳ ವಿಚಾರಣೆಗೆ ಸಿಬ್ಬಂದಿಯ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ, ಆಯೋಗದ ಸಿಬ್ಬಂದಿಯನ್ನು ಜನಗಣತಿ ಕಾರ್ಯದಿಂದ ಮುಕ್ತಗೊಳಿಸಿ ಎಂದು ಆಯೋಗದ ಕಾರ್ಯದರ್ಶಿಗಳು BBMP ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ, ಬಿಬಿಎಂಪಿ ಆಯುಕ್ತರು ಈ ಮನವಿಯನ್ನು ಪರಿಗಣಿಸದೆ ಇರುವುದು ಆಯೋಗವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಇದನ್ನೂ ಓದಿ : ಶಿಲ್ಪಾ ಗಣೇಶ್ ನಿರ್ಮಾಣದ “ಪಿಚ್ಚರ್” ಚಿತ್ರಕ್ಕೆ ನಿತ್ಯಪ್ರಕಾಶ್ ಬಂಟ್ವಾಳ ನಾಯಕ!

Btv Kannada
Author: Btv Kannada

Leave a Comment

Read More

Read More