‘ಪ್ರಜಾಕೀಯ’ ಆಪ್ ರಿಲೀಸ್ ಮಾಡಿದ ರಿಯಲ್ ಸ್ಟಾರ್ – ಆಪ್ ವಿಶೇಷತೆಯೇನು?

ರಿಯಲ್ ಸ್ಟಾರ್ ಉಪೇಂದ್ರ ಅವರು ಆಗಾಗ ತಲೆಗೆ ಹುಳ ಬಿಡೋದು ಸಾಮಾನ್ಯ. ಉಪೇಂದ್ರ ನಟ, ನಿರ್ದೇಶಕ ಅಷ್ಟೇ ಅಲ್ಲದೆ ಒಬ್ಬ ರಾಜಕಾರಣಿಯೂ ಹೌದು. ಆಗಾಗ ತಮ್ಮ ಪ್ರಜಾಕೀಯ ಪಕ್ಷದಿಂದ ಹೊಸ ರೀತಿಯ ಐಡಿಯಾಗಳನ್ನು ತರುತ್ತಲೇ ಇರುತ್ತಾರೆ. 

ಇದೀಗ ‘ದಿ ರಿಯಲ್ ಪ್ರಜಾಕೀಯ’ ಆನ್​​ಲೈನ್ ಆಪ್​ ಬಿಡುಗಡೆ ಮಾಡಿರುವ ಉಪೇಂದ್ರ, ಜನ ಹೇಗೆ ತಮ್ಮ ಆಳುವ ನಾಯಕನನ್ನು ಆಯ್ಕೆ ಮಾಡಬೇಕು, ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನು, ಹೇಗೆ ಆಯ್ಕೆ ಮಾಡಬೇಕು, ಪ್ರಜಾಕೀಯ ಟಿಕೆಟ್ ಬೇಕಾದವರು ಹೇಗೆ ಆಪ್ ಬಳಸಿ ಟಿಕೆಟ್ ಪಡೆಯಬಹುದು ಇತ್ಯಾದಿಗಳನ್ನು ವಿವರಿಸಿದ್ದಾರೆ.

ಉಪ್ಪಿ ‘ಪ್ರಜಾಕೀಯ’ ಪಕ್ಷದ ಆ್ಯಪ್ ಲಾಂಚ್ ಮಾಡಿದ್ದು, ಈ ವೇಳೆ ಏಪ್ರಿಲ್ 1ರಂದು ಮೂರ್ಖರ ದಿನ ಎಂದು ಆಚರಣೆ ಮಾಡಲಾಗುತ್ತದೆ. ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಇಂದು ಆಗುತ್ತದೆ. ಆದರೆ, ಈ ದಿನವನ್ನು ಬುದ್ಧಿವಂತರ ದಿನವನ್ನಾಗಿ ಆಚರಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಚಂದನ್ ಶೆಟ್ಟಿ ನಟನೆಯ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಏ.17ಕ್ಕೆ ರಿಲೀಸ್!

Btv Kannada
Author: Btv Kannada

Leave a Comment

Read More

Read More