‘ಟಾಕ್ಸಿಕ್’​ನಲ್ಲಿ ನಟಿಸಲು ಕಿಯಾರಾ ಗ್ರೀನ್ ಸಿಗ್ನಲ್ ಕೊಟ್ಟಿದ್ದೇಕೆ? ಅಸಲಿ ಕಾರಣ ಬಯಲು!

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಜೂನ್ 4ರಂದು ಬಿಡುಗಡೆಯಾಗುತ್ತಿದೆ. ಬಾಲಿವುಡ್ ತಾರೆ ಕಿಯಾರಾ ಅಡ್ವಾಣಿ ಯಶ್ ಜೊತೆಗೆ ನಟಿಸಿದ್ದಾರೆ. ಇದೀಗ ಕಿಯಾರಾ ಅಡ್ವಾಣಿ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಕಾರಣವೇನು ಅನ್ನೋದನ್ನು ಬಿಚ್ಚಿಟ್ಟಿದ್ದಾರೆ.

ನಾನು ಈವರೆಗೆ ನೋಡಿದ ಭಿನ್ನ ಪಾತ್ರಗಳಲ್ಲಿ ನಾಡಿಯಾ ಕೂಡ ಒಂದು. ನಮ್ಮ ನಿರ್ದೇಶಕಿ ಗಿತು ಮೋಹನ್​​ದಾಸ್ ಪಾತ್ರವನ್ನು ಬರೆದ ರೀತಿ ಹಾಗೂ ಪಾತ್ರವನ್ನು ಕೆತ್ತಿದ ರೀತಿ ನನಗೆ ಇಷ್ಟ ಆಯಿತು. ನಾನು ಆ ಚಾಲೆಂಜ್​​ನ ಸ್ವೀಕರಿಸಬೇಕು ಎನಿಸಿತು. ಅವರ ಆಲೋಚನೆಯಲ್ಲಿ ನನ್ನ ಪಾತ್ರವನ್ನು ಹೇಗೆ ನಿರ್ವಹಿಸಿದ್ದೇನೆ ಎಂಬುದನ್ನು ನೀವೇ ನೋಡಿ ಎಂದಿದ್ದಾರೆ.

ಇತ್ತೀಚೆಗೆ ರಿಲೀಸ್ ಆದ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಎಲ್ಲರ ಮೆಚ್ಚುಗೆ ಪಡೆದಿದೆ. ಈ ಹಾಡಿನ ವಿಡಿಯೋ ಕೂಡ ರಿಲೀಸ್ ಆಗಬೇಕಿತ್ತು ಎಂದು ಅಭಿಮಾನಿಗಳು ಬಯಸಿದ್ದರು. ಶೀಘ್ರವೇ ಅದನ್ನು ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ವಿಶಾಲ್ ಮಿಶ್ರಾ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಸಿನಿಮಾ ಜೂನ್ 4ರಂದು ರಿಲೀಸ್ ಆಗಲಿದೆ. ಮಲಯಾಳಂನ ಗೀತು ಮೋಹನ್​ ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್​ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ : http://ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2026 – ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ!

Btv Kannada
Author: Btv Kannada

Leave a Comment

Read More