ಗೆಳೆಯರ ಬಳಗಕ್ಕೆ ಅನ್‌ಫಾಲೋ ಶಾಕ್ ನೀಡಿದ ಶೆಟ್ರು – ಪತ್ನಿಯನ್ನಷ್ಟೇ ಫಾಲೋ ಮಾಡ್ತಿರೊ ರಿಷಬ್‌!

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರನ್ನೂ ಅನ್‌ಫಾಲೋ ಮಾಡುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಳೆದ ಕೆಲವು ದಿನಗಳಿಂದ ಒಬ್ಬೊಬ್ಬರನ್ನೇ ಅನ್‌ಫಾಲೋ ಮಾಡುತ್ತಾ ಬಂದಿದ್ದ ರಿಷಬ್, ಈಗ ತಮ್ಮ ಇಡೀ ಫಾಲೋಯಿಂಗ್ ಲಿಸ್ಟ್ ಅನ್ನು ಖಾಲಿ ಮಾಡಿದ್ದಾರೆ.

ಅತ್ಯಂತ ಆಪ್ತರಾಗಿದ್ದ ಗೆಳೆಯರ ಬಳಗವನ್ನೇ ರಿಷಬ್ ಅನ್‌ಫಾಲೋ ಮಾಡಿದ್ದು, ಈ ಮೂಲಕ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.

ರಿಷಬ್ ಶೆಟ್ಟಿ ಅವರ ಫಾಲೋಯಿಂಗ್ ಪಟ್ಟಿಯಲ್ಲಿ ಈಗ ಕೇವಲ ಮೂವರು ಮಾತ್ರ ಬಾಕಿ ಉಳಿದಿದ್ದಾರೆ. ಒಬ್ಬರು ಅವರ ಪತ್ನಿ ಪ್ರಗತಿ ಶೆಟ್ಟಿ, ಮತ್ತೊಂದು ಅವರದ್ದೇ ಆದ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಹಾಗೂ ರಿಷಬ್‌ ಶೆಟ್ಟಿ ಫೌಂಡೇಶನ್‌. ಇದನ್ನು ಹೊರತುಪಡಿಸಿ ಚಿತ್ರರಂಗದ ಆಪ್ತ ಗೆಳೆಯರು ಹಾಗೂ ದೊಡ್ಡ ನಿರ್ಮಾಣ ಸಂಸ್ಥೆಗಳನ್ನೂ ಅವರು ಅನ್‌ಫಾಲೋ ಮಾಡಿದ್ದಾರೆ.

ರಿಷಬ್ ಶೆಟ್ಟಿ ತಮ್ಮ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ’ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಅನ್ನು ಅನ್‌ಫಾಲೋ ಮಾಡುವ ಮೂಲಕ ಚರ್ಚೆ ಆರಂಭಿಸಿದ್ದರು. ನಂತರ ತಮ್ಮ ಆತ್ಮೀಯ ಗೆಳೆಯರಾದ ರಾಜ್ ಬಿ. ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಅವರನ್ನೂ ಪಟ್ಟಿಯಿಂದ ಕೈಬಿಟ್ಟಿದ್ದರು.

ಇದೀಗ ಅಂತಿಮವಾಗಿ ಎಲ್ಲರನ್ನೂ ಅನ್‌ಫಾಲೋ ಮಾಡುವ ಮೂಲಕ ತಮ್ಮ ಇನ್‌ಸ್ಟಾಗ್ರಾಂ ಫಾಲೋಯಿಂಗ್ ಲಿಸ್ಟ್ ಮೂರಕ್ಕೆ ತಂದು ನಿಲ್ಲಿಸಿದ್ದಾರೆ. ಶೆಟ್ಟರ ಈ ನಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : http://‘ಟಾಕ್ಸಿಕ್’​ನಲ್ಲಿ ನಟಿಸಲು ಕಿಯಾರಾ ಗ್ರೀನ್ ಸಿಗ್ನಲ್ ಕೊಟ್ಟಿದ್ದೇಕೆ? ಅಸಲಿ ಕಾರಣ ಬಯಲು!

Btv Kannada
Author: Btv Kannada

Leave a Comment

Read More