ಮೈಸೂರು : ನಗರದ ಸಿಟಿ ಮಧ್ಯೆಯೇ ಇರುವ KVC ಆಸ್ಪತ್ರೆಯ ಕರ್ಮಕಾಂಡ ಬಟಾಬಯಲಾಗಿದೆ. ಮೈಸೂರಿನ DCಯವ್ರೇ, ಪೊಲೀಸ್ ಕಮಿಷನರ್ ಅವ್ರೇ ಏನ್ಮಾಡ್ತಿದ್ದೀರಿ? ನಿಮ್ಮ ಕೆಲಸ-ಕಾರ್ಯಗಳ ಮಧ್ಯೆ ಸ್ವಲ ಬಿಡುವು ಮಾಡಿಕೊಂಡು ಈ ಸುದ್ದಿ ನೋಡಿ. ದಂಧೆ ನಡೆಸ್ತಿರೋ KVC ಆಸ್ಪತ್ರೆ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಿ.

ಹೌದು.. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯೋರ್ವರು KVC ಆಸ್ಪತ್ರೆಯ ಕರ್ಮಕಾಂಡ ಬಿಚ್ಚಿಟ್ಟಿದ್ದಾರೆ. ಗಾಯಗೊಂಡ ತನ್ನ ಮಗುವಿಗೆ ಟ್ರೀಟ್ಮೆಂಟ್ ಕೊಡದೇ ಬಿಲ್ ಕೊಟ್ಟ ಆರೋಪ ಮಾಡಿದ್ದಾರೆ. ಆಕ್ರೋಶಿತ ತಾಯಿಯ ವಿಡಿಯೋ ಎಲ್ಲೆಡೆ ವೈರಲ್ ಆದ್ಮೇಲೂ ಕೂಡ ಆಡಳಿತ ಮಾತ್ರ ಸೈಲೆಂಟ್ ಆಗಿದ್ದು, FIR ಮಾಡಿ ಸಂಬಂಧಪಟ್ಟವರನ್ನ ಅರೆಸ್ಟ್ ಮಾಡಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನು ಮೈಸೂರಿನ KVC ಆಸ್ಪತ್ರೆಯಲ್ಲಿ ರೋಗಿಗಳ ಆರ್ತನಾದ ಇದೇ ಮೊದಲಲ್ಲ. ಸಾಲು ಸಾಲು ದೂರುಗಳಿದ್ರೂ ದೇವರಾಜ ಪೊಲೀಸರು ಕ್ರಮ ಕೈಗೊಳ್ಳದೆ ಸುಮ್ಮನ್ನಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸೂಕ್ತ ತಜ್ಞ ವೈದ್ಯರಿಲ್ಲದಿದ್ದರೂ ನಡೆಯುತ್ತಿರುವ ಈ ಹೈಟೆಕ್ ಆಸ್ಪತ್ರೆಯ ಜಾಗದಲ್ಲಿ ಕೊರೋನಾಗಿಂತ ಮುಂಚೆ ಮಾಲೀಕ ಕೆ.ವಿ.ಚಿನ್ನಯ್ಯ ಎಂಬವರು ಹೋಟೆಲ್ ನಡೆಸ್ತಿದ್ದರು.
ಫುಟ್ಪಾತ್ ಅನ್ನೇ ನುಂಗಿ ಕಟ್ಟಡ ನಿರ್ಮಿಸಿದ್ದ ಕಾಂಟ್ರಾಕ್ಟರ್ ಕೆ.ವಿ. ಚಿನ್ನಯ್ಯ, ಈಗ ಆಸ್ಪತ್ರೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಜಿಲ್ಲಾಡಳಿತವು ಕೊರೋನಾ ವೇಳೆ ಹೋಟೆಲ್ ಅನ್ನು ಕ್ವಾರಂಟೈನ್ಗಾಗಿ ಪಡೆದಿತ್ತು. ಬಳಿಕ ಹೊಟೇಲ್ಗಿಂತ ಆಸ್ಪತ್ರೆ ಬ್ಯುಸಿನೆಸ್ ಲಾಭ ಜಾಸ್ತಿ ಅಂದ್ಕೊಂಡ ಕಾಂಟ್ರಾಕ್ಟರ್ ಕೆ.ವಿ. ಚಿನ್ನಯ್ಯ ಅವರು ಹೊಟೇಲ್ ಮುಚ್ಚಿ ಅಲ್ಲೇ ಹಾಸ್ಪಿಟಲ್ ಓಪನ್ ಮಾಡಿದ್ದಾರೆ. ಆಸ್ಪತ್ರೆಗೂ ಮೊದ್ಲು ಅಕ್ರಮವಾಗಿ ಬಾರ್ ಲೈಸೆನ್ಸ್ ಪಡೆದಿದ್ದ ಕೆವಿ ಚಿನ್ನಯ್ಯ, ಸಾರ್ವಜನಿಕ ಆಕ್ರೋಶದ ಬಳಿಕ, ಬಾರ್ ಬಿಟ್ಟು ಆಸ್ಪತ್ರೆ ಆರಂಭ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ಈ ಆಸ್ಪತ್ರೆಯಲ್ಲಿ ಡಾಕ್ಟರ್ಗಳೇ ಇಲ್ಲ, ಲಿಸ್ಟ್ನಲ್ಲಿ ಸ್ಪೆಷಾಲಿಸ್ಟ್ ಆಸ್ಪತ್ರೆಗೆ ಬರೋದೇ ಇಲ್ಲ. ಆದ್ರೂ ಕೂಡ ರೋಗಿಯನ್ನು ನೋಡದೆ, ಮುಟ್ಟದೆ ಇಲ್ಲಿನ ಡಾಕ್ಟರ್ಸ್ ಟ್ರೀಟ್ಮೆಂಟ್ ಕೊಡೋದ್ರಲ್ಲಿ ಸ್ಪೆಷಾಲಿಸ್ಟ್ಸ್. ಸೂಜಿ, ಹತ್ತಿಯಿಂದ ಹಿಡಿದು ಎಲ್ಲದಕ್ಕೂ ಇಲ್ಲಿ ಸಪರೇಟ್ ಸಪರೇಟ್ ಬಿಲ್ ಕಟ್ಟಬೇಕಾಗಿದೆ. ಬಿಲ್ಲಿಂಗ್ ಎಕ್ಸ್ಪರ್ಟ್ಗಳಿರೋ ಈ ಹೈಟೆಕ್ ಆಸ್ಪತ್ರೆ ವಿರುದ್ದ ಸಾರ್ವಜನಿಕರು ಭಾರೀ ಆಕ್ರೋಶ ಹೊರಹಾಕಿದ್ದು, ಕೂಡಲೇ ತಜ್ಞ ವೈದ್ಯರಿಲ್ಲದ್ದ, ಸೌಕರ್ಯಗಳಿಲ್ಲದೇ ನಡೆಸುತ್ತಿರುವ ಈ ಆಸ್ಪತ್ರೆಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
