ಬೆಂಗಳೂರು : ಗೋಲ್ಡ್ ಸ್ಮಗ್ಲಿಂಗ್ ಆರೋಪದ ಮೇಲೆ ನಟಿ ರನ್ಯಾ ರಾವ್ ಸದ್ಯ ಜೈಲು ಸೇರಿದ್ದಾರೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ತಿದೆ. ತನಿಖೆ ವೇಳೆ ಅನೇಕ ವಿಚಾರಗಳು ಬಯಲಾಗುತ್ತಿದೆ. ರನ್ಯಾಗೆ ಪ್ರಭಾವಿ ರಾಜಕಾರಣಿಗಳ ಜೊತೆ ನಂಟಿದ್ದು, ಇಬ್ಬರು ಮಂತ್ರಿಗಳ ಹೆಸರು ಕೂಡ ಈ ಕೇಸ್ನಲ್ಲಿ ತಳುಕು ಹಾಕಿಕೊಂಡಿದೆ ಎನ್ನಲಾಗ್ತಿದೆ.

ಈ ಮಧ್ಯೆ ಗೋಲ್ಡ್ ಸ್ಮಗ್ಲಿಂಗ್ ಕೇಸ್ಗೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಆಪ್ತರಾಗಿರುವ ಮತ್ತಿಬ್ಬರನ್ನು DRI ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚಿಕ್ಕಮಗಳೂರಿನ ಹೊಸಮನೆ ಬಡಾವಣೆ ಮೂಲದ ಕಾರ್ ಡ್ರೈವರ್ ದೀಪಕ್ ಹಾಗೂ ರನ್ಯಾ ಆಪ್ತನನ್ನು ಬಂಧಿಸಿದ DRI ಅಧಿಕಾರಿಗಳು, ಸದ್ಯ ವಿಚರಾಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Author: Btv Kannada
Post Views: 39