ಬೆಂಗಳೂರು : ಈತ ತೆರಿಗೆ ವಂಚಕರ ಪಾಲಿನ ಡಾರ್ಲಿಂಗ್, ಕಿಕ್ಬ್ಯಾಕ್ ಆಸೆಗೆ ಏನ್ ಬೇಕಾದ್ರೂ ಮಾಡೋ ಕರಪ್ಟ್ ಆಫೀಸರ್.. ತೆರಿಗೆ ಕಡತವನ್ನೇ ಮನೆಯಲ್ಲಿ ಬಚ್ಚಿಟ್ಟುಕೊಂಡು ಪ್ರತಿಷ್ಠಿತ ಆಸ್ಪತ್ರೆಯ ತೆರಿಗೆ ಮೋಸಕ್ಕೆ ಸಹಕಾರ ನೀಡುತ್ತಲೇ ಬಂದ BBMP ಕಂದಾಯ ಅಧಿಕಾರಿ ಪರಮಭ್ರಷ್ಟ ಬಸವಾಚಾರಿ ಇದೀಗ ಖಡಕ್ IAS ಮುನೀಶ್ ಮೌದ್ಗಿಲ್ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕೋಟಿ ಕೋಟಿ ಹಣದ ಆಸೆಗೆ ಪ್ರತಿಷ್ಠಿತ ಆಸ್ಪತ್ರೆಯ ತೆರಿಗೆ ಮೋಸಕ್ಕೆ ಸಹಕಾರ ನೀಡುತ್ತಿದ್ದ BBMP ಕಂದಾಯಾಧಿಕಾರಿ ಪರಮಭ್ರಷ್ಟ ಬಸವಾಚಾರಿ ಲೂಟಿ ಕಹಾನಿ IAS ಮುನೀಶ್ ಮೌದ್ಗಿಲ್ ತನಿಖೆಯಲ್ಲಿ ಬಟಾಬಯಲಾಗಿದೆ.

ಭ್ರಷ್ಟ ಬಸವಾಚಾರಿ ತೆರಿಗೆ ವಂಚಕರಿಂದ ಮಾಮೂಲು ಫಿಕ್ಸ್ ಮಾಡಿಕೊಂಡು ಲೂಟಿ ಮಾಡುತ್ತಿದ್ದ. ಮಹಾದೇವಪುರ ವಲಯದಲ್ಲಿ ಬಸವಾಚಾರಿ ಎಂದ್ರೆ ಲೂಟಿಗೆ ಫೇಮಸ್ ಆಗಿದ್ದ. ಆಸ್ತಿ ತೆರಿಗೆ ಕಳ್ಳರಿಗೆ ಅನುಕೂಲ ಮಾಡಲು ಎಂಥಾ ಕೆಲಸಕ್ಕೂ ಬಸವಾಚಾರಿ ಸೈ ಎನ್ನುತ್ತಿದ್ದ. ಹಣದಾಸೆಗೆ ತೆರಿಗೆ ಕಳ್ಳರನ್ನು ಸೇಫ್ ಮಾಡಲು ಕಡತವನ್ನೇ ಮಾಯ ಮಾಡದ್ತಿದ್ದ.

ಹಾಗೆಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಉಳಿಸಿಕೊಂಡ ಆಸ್ತಿ ತೆರಿಗೆ ಕಡತವನ್ನೇ ಬಸವಾಚಾರಿ ಮಾಯ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 50 ಕೋಟಿ ಬಾಕಿ ಉಳಿಸಿಕೊಂಡ ಆಸ್ಪತ್ರೆಗೆ ಅನುಕೂಲಕ್ಕೆ ಸಹಾಯ ಮಾಡಿದ್ದ ಪರಮಭ್ರಷ್ಟ ಬಸವಾಚಾರಿ, 1 ವರ್ಷದಿಂದ ಮನೆಯಲ್ಲಿಯೇ ಕಡತ ಮುಚ್ಚಿಟ್ಡಿದ್ದ.

ಇದೀಗ ಈ ಕುರಿತು ತನಿಖೆ ಕೈಗೊಂಡ ಖಡಕ್ IAS ಅಧಿಕಾರಿ ಮುನೀಶ್ ಮೌದ್ಗಿಲ್ ಕೈಗೆ ಪರಮಭ್ರಷ್ಟ ಬಸವಾಚಾರಿ ಸಿಕ್ಕಿಬಿದ್ದಿದ್ದಾನೆ. IAS ಮುನೀಶ್ ಮೌದ್ಗಿಲ್ ತನಿಖೆಯಿಂದ ಈತನ ಬಗ್ಗೆ ಸ್ಪೋಟಕ ಸತ್ಯಗಳು ಬಯಲಾಗಿದೆ. ಹಾಗಾಗಿ ಭ್ರಷ್ಟ ಅಧಿಕಾರಿ ಬಸವಾಚಾರಿಯನ್ನು ಸೇವೆಯಿಂದ ಅಮಾನತು ಮಾಡುವಂತೆ BBMP ಕಮಿಷನರ್ಗೆ ಮುನೀಶ್ ಮೌದ್ಗಿಲ್ ಅವರು ಪತ್ರ ಬರೆದಿದ್ದಾರೆ.
