ನಟಿ ರನ್ಯಾ ರಾವ್​ ಜಾಮೀನು ಅರ್ಜಿ ವಜಾ.. ಚಿನ್ನದ ಚಕೋರಿಗೆ ಜೈಲೇ ಗತಿ!

ಬೆಂಗಳೂರು : ಗೋಲ್ಡ್ ಸ್ಮಗ್ಲಿಂಗ್‌ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾಗೊಂಡಿದೆ. ಆರ್ಥಿಕ ಅಪರಾಧಗಳ ನ್ಯಾಯಾಲಯವು ರನ್ಯಾ ರಾವ್​ ಅವರ ಜಾಮೀನು ಅರ್ಜಿಯನ್ನು ತಿರಸ್ಕೃತ ಮಾಡಿ ಇದೀಗ ಆದೇಶ ಹೊರಡಿಸಿದೆ. 

ಈ ಪ್ರಕರಣದಲ್ಲಿ ಈಗಾಗಲೇ ದಿನ ಡಿಆರ್​ಐ, ಸಿಬಿಐ ತನಿಖೆ ನಡೆಸುತ್ತಿವೆ. ಇದರ ಮಧ್ಯ ಇದೀಗ ಇಡಿ ಸಹ ಈ ಪ್ರಕರಣದಲ್ಲಿ ಪ್ರವೇಶ ಮಾಡಿದ್ದು ನಿನ್ನೆ ರನ್ಯಾ ರಾವ್ ಫ್ಲ್ಯಾಟ್​​ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಮತ್ತೊಂದೆಡೆ ರನ್ಯಾ ರಾವ್​ ಜಾಮೀನು ಅರ್ಜಿ ಸಹ ತಿರಸ್ಕೃತವಾಗಿದೆ.

ನಟಿ ರನ್ಯಾ ರಾವ್​ ಅರ್ಜಿ ವಜಾ ಆಗಲು ಕಾರಣಗಳೇನು..?

ರನ್ಯಾ ರಾವ್ ಕೇಸಲ್ಲಿ ಅಂತರರಾಷ್ಟ್ರೀಯ ಲಿಂಕ್ ಇದ್ದು, ಈ ಕೇಸಲ್ಲಿ ಕಸ್ಟಮ್ಸ್ ಬ್ಯಾಗೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ. ರನ್ಯಾ ಜೈಲಿಂದ ಹೊರ ಬಂದ್ರೆ ಸಾಕ್ಷಿ ನಾಶ, ಮಿಸ್ ಲೀಡ್ ಮಾಡಬಹುದು. ಇನ್ನು ರನ್ಯಾ ರಾವ್ ಒಂದು ವರ್ಷದಲ್ಲಿ 27 ಬಾರಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದ್ರಿಂದ್ರ 38% ಕಸ್ಟಮ್ಸ್ ತೆರಿಗೆ ವಂಚನೆ ಆಗಿದೆ. ಒಟ್ಟು 4,83,72,694 ರೂ. ಸುಂಕ ವಂಚನೆಯಾಗಿದ್ದು, ಆಕೆಯ ಬಳಿ ದುಬೈ ರೆಸಿಡೆಂಟ್ ಐಡೆಂಟಿಟಿ ಕಾರ್ಡ್ ಇದೆ. ಹೀಗಾಗಿ ಜಾಮೀನು ಕ್ಯಾನ್ಸಲ್​ ಆಗಿರುವ ಸಾಧ್ಯತೆಯಿದೆ.

Btv Kannada
Author: Btv Kannada

Leave a Comment

Read More

01:47