ಬೆಂಗಳೂರು : ಅಕ್ರಮವಾಗಿ ತಂಬಾಕು ತರಿಸಿ ಶೇಖರಿಸಿಟ್ಟಿದ್ದ ಗೋದಾಮಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 45 ಲಕ್ಷ ಮೌಲ್ಯದ 4 ಲಕ್ಷ 21 ಸಾವಿರ ಪ್ಯಾಕೆಟ್ ತಂಬಾಕನ್ನು ಸೀಜ್ ಮಾಡಿದ್ದಾರೆ. ಗಣೇಶ್ ಹಾಗೂ ಹನ್ಸ್ ಕಂಪನಿಯ ತಂಬಾಕನ್ನು ಅಕ್ರಮವಾಗಿ ಶೇಖರಿಸಿಟ್ಟಿದ್ದ ಆರೋಪಿ ದಿಲೀಪ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಿಲ್ ಇಲ್ಲದೇ ಅಕ್ರಮವಾಗಿ ತಂಬಾಕುಗಳನ್ನು ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭೂವಲ್ ಮ್ಯಾನ್ಶನ್ ಗೋದಾಮಿನಲ್ಲಿ ಆರೋಪಿ ದಿಲೀಪ್ ಶೇಖರಿಸಿಟ್ಟಿದ್ದ. ಕಾರ್ಯಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಎಲ್ಲವನ್ನು ಸೀಜ್ ಮಾಡಿದ್ದು, ಆರೋಪಿಯನ್ನು ಬಂಧಿಸಿದೆ.

ಇನ್ನು ಸರ್ಕಾರದ ನಿಯಮದ ಪ್ರಕಾರ ತಂಬಾಕು ಆರೋಗ್ಯಕ್ಕೆ ಅಂತಾ ಕಾಣಿಸುವ ಹಾಗೆ ತಂಬಾಕು ಪ್ಯಾಕೆಟ್ ಮೇಲೆ ಹಾಕಬೇಕು. ಆದರೆ ಸೀಜ್ ಮಾಡಿದ ಪ್ಯಾಕೆಟ್ಗಳ ಮೇಲೆ ಸರಿಯಾಗಿ ನಮೂದಿಸದೇ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author: Btv Kannada
Post Views: 24