IML 2025 : ಸಚಿನ್-ಯುವಿ ಸ್ಫೋಟಕ ಬ್ಯಾಟಿಂಗ್.. ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಭಾರತ!

ರಾಯ್‌ಪುರ : ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್ಸ್​ ಲೀಗ್ ಟಿ20 ಲೀಗ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್​ ತಂಡವು, ಶೇನ್ ವಾಟ್ಸನ್ ನಾಯಕತ್ವದ ಆಸ್ಟ್ರೇಲಿಯಾ ಮಾಸ್ಟರ್ಸ್​ ತಂಡವನ್ನು ಹೀನಾಯವಾಗಿ ಮಣಿಸಿ ಮೊದಲ ತಂಡವಾಗಿ ಫೈನಲ್​ಗೇರಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್​ ತಂಡ 20 ಓವರ್‌ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್​ ತಂಡ, ಇಂಡಿಯಾ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 126 ರನ್​ಗಳಿಗೆ ಆಲೌಟ್ ಆಯಿತು.

ಪಂದ್ಯದಲ್ಲಿ ಟಾಸ್​ ಸೋತ್ರೂ ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡದ ಪರ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್​ ಅಬ್ಬರಿಸಿದರು. ಕೇವಲ 30 ಬಾಲ್​ನಲ್ಲಿ 7 ಭರ್ಜರಿ ಸಿಕ್ಸರ್​ ಸಮೇತ 1 ಫೋರ್​ನೊಂದಿಗೆ 59 ರನ್​ ಚಚ್ಚಿದ್ರು. ಜೊತೆ ಮಾಸ್ಟರ್ ಬ್ಲಾಸ್ಟರ್ ಸಚಿನ್​ ತೆಂಡುಲ್ಕರ್​​ 7 ಫೋರ್​ ಸಮೇತ 42 ರನ್​ ಬಾರಿಸಿದರು. ಇಷ್ಟೇ ಅಲ್ಲ ಸ್ಟುವರ್ಟ್ ಬಿನ್ನಿ 36, ಯೂಸಫ್​ ಪಠಾಣ್​ 23, ಇರ್ಫಾನ್​ ಪಠಾಣ್​​ 19, ನೇಗಿ 14 ರನ್​ ಗಳಿಸಿದರು. ಭಾರತ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 220 ರನ್​ಗಳ ಬೃಹತ್​ ಮೊತ್ತವನ್ನು ಕಲೆ ಹಾಕಿತ್ತು.

ಗೆಲ್ಲಲು 221 ರನ್​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್​ ತಂಡಕ್ಕೆ ಯಾವ ಹಂತದಲ್ಲೂ ಒಂದು ಉತ್ತಮ ಜೊತೆಯಾಟ ಸಿಕ್ಕಲಿಲ್ಲ. ತಂಡ 15 ರನ್​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ತಂಡದ ಪರ ಏಕಾಂಗಿ ಹೋರಾಟ ನಿಡಿದ ಬೆನ್ ಕಟ್ಟಿಂಗ್ 39 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಆಸ್ಟ್ರೇಲಿಯಾ ಮಾಸ್ಟರ್ಸ್​ ತಂಡ 18.1 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಲಷ್ಟೇ ಶಕ್ತವಾಗಿ 94 ರನ್​ಗಳಿಂದ ಸೋಲೊಪ್ಪಿಕೊಂಡಿತು.

Btv Kannada
Author: Btv Kannada

Leave a Comment

Read More

02:49