ಹಾವೇರಿಯಲ್ಲಿ ಯುವತಿಯ ಲವ್ ಜಿಹಾದ್ ಹತ್ಯೆ ಆರೋಪ – ಆರೋಪಿ ನಯಾಜ್ ಅರೆಸ್ಟ್​.. ವಿನಯ್, ದುರ್ಗಾಚಾರಿಗೆ ಶೋಧ​!

ಹಾವೇರಿ : ಹಾವೇರಿಯಲ್ಲಿ ಮೂವರು ಯುವಕರು ಸೇರಿ ಯುವತಿಯನ್ನ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ 23 ವರ್ಷದ ಯುವತಿ ಸ್ವಾತಿ ಹತ್ಯೆಯಾದ ಯುವತಿ.

ಸ್ವಾತಿ ಮತ್ತು ನಯಾಜ್ ಇಬ್ಬರು ಪ್ರೀತಿಸುತ್ತಿದ್ರು, ಕೆಲ ದಿನಗಳಿಂದ ನಯಾಜ್​ ಸ್ವಾತಿ ಪ್ರೀತಿಗೆ ನಿರಾಕರಿಸಿದ್ದ. ಹೀಗಾಗಿ ನಯಾಜ್​ ಬಳಿ ಲವ್ ಕಾಂಪ್ರಮೈಸ್​ಗೆಂದು ಗೆಳಯರಾದ ವಿನಯ್, ದುರ್ಗಾಚಾರಿ ಕಾರಲ್ಲಿ ಸ್ವಾತಿಯನ್ನ ಕರೆದುಕೊಂಡು ಹೋಗಿ, ನಯಾಜ್ ನಿಂದ ದೂರ ಆಗುವಂತೆ ಹೇಳಿದ್ದಾರೆ. ಆದ್ರೆ ಆ ಯುವತಿ ಒಪ್ಪದಿದ್ದಾಗ ಮೂವರು ಸೇರಿ ಸ್ವಾತಿಯ ದುಪ್ಪಟ್ಟ ಕೊರಳಿಗೆ ಹಾಕಿ ಹತ್ಯೆ ಮಾಡಿದ್ದಾರೆ. ನಂತರ ತುಂಗಭದ್ರಾ ನದಿಗೆ ಹೆಣ ಬಿಸಾಕಿ ಎಸ್ಕೇಪ್​ ಆಗಿದ್ದಾರೆ.

ಮಾರ್ಚ್​ 2ರಂದು ಯುವತಿಯ ಬರ್ಬರ ಕೊಲೆಯಾಗಿದೆ. ಆದ್ರೆ ಪೊಲೀಸರಿಗೆ, ಮಾರ್ಚ್ 6ರಂದು ಹರಿಹರ ಮತ್ತು ಹೊಳೆಸಿರಿಗೇರಿ ಮಧ್ಯದಲ್ಲಿ ಶವ ಪತ್ತೆಯಾಗಿದೆ. ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿಕೊಂಡು ಪೊಲೀಸರೆ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಇದೀಗ ಕೊಲೆ ಆರೋಪಿ ನಯಾಜ್​ ನನ್ನ ಪೊಲೀಸರು ಅರೆಸ್ಟ್​ ಮಾಡಿದ್ದು, ಸದ್ಯ ತನಿಖೆಯಲ್ಲಿ ಸ್ವಾತಿ ಹತ್ಯೆಯ ಮತ್ತಷ್ಟು ಸತ್ಯ ಬಯಲಾಗ ಬೇಕಿದೆ.

Btv Kannada
Author: Btv Kannada

Leave a Comment

Read More

01:37