ಗೋಲ್ಡ್ ಸ್ಮಗ್ಲಿಂಗ್ ಕೇಸ್​ – ನಟಿ ರನ್ಯಾ ರಾವ್​ಗೆ ಜೈಲಾ, ಬೇಲಾ? ಇಂದು ಜಾಮೀನು‌ ಭವಿಷ್ಯ ನಿರ್ಧಾರ!

ಬೆಂಗಳೂರು : ಗೋಲ್ಡ್ ಸ್ಮಗ್ಲಿಂಗ್‌ ಪ್ರಕರಣದಲ್ಲಿ ಸಿಲುಕಿರುವ ನಟಿ ರನ್ಯಾ ರಾವ್​ ಜಾಮೀನು ಆದೇಶವನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ (ಮಾ.14) ಇಂದು ಪ್ರಕಟಿಸಲಿದೆ.

ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ ಪ್ರಕರಣದಲ್ಲಿ ಸ್ಫೋಟಕ ವಿಚಾರಗಳು ಬಯಲಿಗೆ ಬರ್ತಿದ್ದು, ಕಳೆದ ವರ್ಷದ ಕೊನೆಯಲ್ಲಿ 2 ಬಾರಿ ದುಬೈನಲ್ಲಿ ಚಿನ್ನ ಖರೀದಿ ಮಾಡಿದ್ದ ರನ್ಯಾ ರಾವ್, ಅದನ್ನು ಸ್ವಿಟ್ಜರ್‌ಲೆಂಡ್‌ಗೆ ಕೊಂಡೊಯ್ಯೋದಾಗಿ ಹೇಳಿ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳನ್ನು ಯಾಮಾರಿಸಿದ್ದರು. ಜಿನೇವಾಗೆ ಹೋಗೋದಾಗಿ ಸುಳ್ಳು ಹೇಳಿದ್ದ ರನ್ಯಾ ರಾವ್ ನೇರವಾಗಿ ಭಾರತಕ್ಕೆ ಬಂದಿದ್ರು ಎಂಬುದು ಆಕೆಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಗೊತ್ತಾಗಿದೆ ಎಂದು ಡಿಆರ್‌ಐ ಅರೆಸ್ಟ್ ಮೆಮೋದಲ್ಲಿ ತಿಳಿಸಿದೆ.

ಇನ್ನು ರನ್ಯಾ ರಾವ್ ನಿರಂತರವಾಗಿ ಗೋಲ್ಡ್ ಸ್ಮಗ್ಲಿಂಗ್‌ ಮಾಡಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕಿಂಗ್‌ಪಿನ್ ಆಗಿರುವ ಈಕೆ ಆರು ತಿಂಗಳು ದೇಶದಿಂದ ಹೊರಗೆ ಇರ್ತಿದ್ರು. ಕಳೆದ ಬಾರಿ ರನ್ಯಾ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಎಲ್ಲಾ ಅಂಶಗಳು ಪ್ರಸ್ತಾಪವಾಗಿದೆ.

ರನ್ಯಾ ರಾವ್ ಪರ ವಕೀಲರ ವಾದ : ಸರ್ಚ್ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ. ನಿದ್ದೆ ಮಾಡೋಕೂ ಬಿಡದೇ ವಿಚಾರಣೆ ನಡೆಸಿದ್ದಾರೆ. ನಿದ್ದೆಯ ಹಕ್ಕನ್ನು ಕಿತ್ಕೊಂಡಿದ್ದಾರೆ ಎಂದು ರನ್ಯಾ ಪರ ವಕೀಲ ಕಿರಣ್ ಜವಳಿ ವಾದ ಮಂಡಿಸಿದ್ದಾರೆ. ರನ್ಯಾ ಮದ್ವೆಯಾದ ಮಹಿಳೆ. ಅವರೆಲ್ಲೂ ಹೋಗಲ್ಲ. ಜಾಮೀನು ನೀಡಿ ಎಂದು ರನ್ಯಾ ಪರ ವಕೀಲರು ಮನವಿ ಮಾಡಿದ್ದಾರೆ.

ಆದ್ರೆ, ಇದನ್ನು ಡಿಆರ್‌ಐ ಪರ ವಕೀಲ ವಕೀಲ ಮಧುರಾವ್ ಆಕ್ಷೇಪಿಸಿದ್ದು, ರನ್ಯಾಗೆ ಕರೆ ಮಾಡಿದ್ದ ವ್ಯಕ್ತಿಗೆ ಸಮನ್ಸ್ ನೀಡಿ ಹೇಳಿಕೆ ಪಡೆಯಲಾಗಿದೆ. ಯಾವುದೇ ಲೋಪ ಎಸಗಿಲ್ಲ. ಆಕೆ ಬಳಿ ಯುಎಇ ರೆಸಿಡೆನ್ಸಿ ಕಾರ್ಡ್ ಸಿಕ್ಕಿದೆ. ಹೀಗಾಗಿ ಜಾಮೀನು ಕೊಡಬಾರದು ಎಂದು ಪ್ರತಿವಾದ ಮಂಡಿಸಿದ್ದಾರೆ. ಕಡೆಗೆ ಕೋರ್ಟ್ ಇಂದಿಗೆ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿತ್ತು.

ಒಂದು ವೇಳೆ ನ್ಯಾಯಾಲಯ ಇಂದು ಜಾಮೀನು ಅರ್ಜಿಯನ್ನು ವಜಾಗೊಳಿಸಿದರೆ ರನ್ಯಾ ಅವರು ಮುಂದೆ ಜೈಲಿನಲ್ಲೇ ಉಳಿಯಬೇಕಾಗುತ್ತದೆ. ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲು ಅವರು ಸೆಷನ್ಸ್ ನ್ಯಾಯಾಲಯವನ್ನು ಅಥವಾ ನಂತರ ಹೈಕೋರ್ಟ್‌ ಅನ್ನು ಸಂಪರ್ಕಿಸಬಹುದು.

Btv Kannada
Author: Btv Kannada

Leave a Comment

Read More

01:47