ಬೆಂಗಳೂರು : ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ನಟಿ ರನ್ಯಾ ರಾವ್ ಬಂಧನಕ್ಕೊಳಗಾಗಿದ್ದು, ಈ ಪ್ರಕರಣದ ತನಿಖೆಯನ್ನು ಡಿಆರ್‌ಐ ಮತ್ತು ಸಿಬಿಐ ಈಗಾಗಲೇ ತೀವ್ರಗೊಳಿಸಿವೆ. ಚಿನ್ನದ ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಮೇಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜತಿನ್ ಹುಕ್ಕೇರಿ ಅವರು ಹಲವು ಬಾರಿ ರನ್ಯಾ ರಾವ್ ಅವರ ಜೊತೆ ದುಬೈಗೆ ಪ್ರಯಾಣ ಮಾಡಿದ್ದಾರೆ ಎಂದು ಪೊಲೀಸರು ಆರೋಪ ಮಾಡಿದ್ದಾರೆ. ಇವರಿಬ್ಬರೂ ಇತ್ತೀಚೆಗಷ್ಟೇ ತಾಜ್ ವೆಸ್ಟ್ ಎಂಡ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದೀಗ ರನ್ಯಾ ಪತಿಯ ಮೇಲೂ ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದು, ಆತನ ವಿರುದ್ಧವೂ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ರನ್ಯಾ ಪತಿ ಜತಿನ್ ಫ್ಲ್ಯಾಟ್ ಮೇಲೆ ಇದೀಗ DRI ಅಧಿಕಾರಿಗಳು ರೇಡ್ ಮಾಡಿದ್ದು, ಪತಿ ಜತಿನ್ಗೆ ಸಂಬಂಧಿಸಿದ ಒಂಭತ್ತು ಕಡೆ DRI ದಾಳಿ ನಡೆಸಿದೆ. DRI ಅಧಿಕಾರಿಗಳು ಇಂದಿರಾ ನಗರ, ಕೋರಮಂಗಲದಲ್ಲಿ ದಾಳಿ ನಡೆಸಿದ್ದಾರೆ. ದುಬೈಗೆ ಫ್ಲೈಟ್ ಬುಕ್ ಮಾಡಲು ರನ್ಯಾ ಪತಿಯ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದಾರೆ. ಹೀಗಾಗಿ, ಪತಿ ಜತಿನ್ ಹುಕ್ಕೇರಿಗೆ ಸೇರಿದ ಸ್ಥಳಗಳ ಮೇಲೆ ರೇಡ್ ಮಾಡಲಾಗಿದೆ.
