ಚಾಮರಾಜನಗರ : ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ನಡೆದಿದ್ದು, ಈ ಬಾರಿ 20 ದಿನಗಳ ಅವಧಿಯಲ್ಲಿ 2.85 ಕೋಟಿ ರೂ. ಸಂಗ್ರಹವಾಗಿದೆ.

ಅಮಾವಾಸ್ಯೆ ಸರ್ಕಾರಿ ರಜಾ ದಿನ, ಪಾದಯಾತ್ರಿಗಳು, ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಸೇರಿದಂತೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಕ್ತರು ಹರಕೆಯ ರೂಪದಲ್ಲಿ 2,85,60,937 ನಗದು, 27 ಗ್ರಾಂ ಚಿನ್ನ ಹಾಗೂ 1,800 ಗ್ರಾಂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
ಇದಲ್ಲದೆ ಇ -ಹುಂಡಿಯಿಂದ 2,75,204 ರೂ., 31 ವಿದೇಶಿ ನೋಟುಗಳು, ಇದಲ್ಲದೇ ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 1 ನೋಟು ಹುಂಡಿಯಲ್ಲಿದ್ದವು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Author: Btv Kannada
Post Views: 18