ಬೆಂಗಳೂರು : ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ರಾಜ್ಯದ 2025 ರ ಬಜೆಟ್‌ನಿಂದ ರೂಪಾಯಿ ಚಿಹ್ನೆಯನ್ನು (₹) ತೆಗೆದುಹಾಕಲು ನಿರ್ಧರಿಸಿದೆ. ರೂಪಾಯಿ ಚಿಹ್ನೆಯ ಬದಲು ತಮಿಳು ಅಕ್ಷರ ಬಳಸಿದೆ.
ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ನೀತಿ ತಂದು ಹಿಂದಿ ಹೇರಿಕೆ ಮಾಡುತ್ತಿದೆ ಎಂದು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಡಿಎಂಕೆ ಪಕ್ಷ ಇದೀಗ ಬಜೆಟ್ ಪ್ರಚಾರದ ಪ್ರತಿಯಲ್ಲಿ ರುಪಾಯಿ ಚಿಹ್ನೆಯನ್ನು ಬದಲಿಸಿದೆ.
ಹಿಂದಿ ಹೇರಿಕೆ ಆರೋಪದ ಮೇಲೆ ಕೇಂದ್ರ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ಜಗಳದ ಮಧ್ಯೆಯೇ ರಾಜ್ಯ ಬಜೆಟ್‌ನಿಂದ ₹ ಚಿಹ್ನೆಯನ್ನು ತೆಗೆದುಹಾಕುವ ನಿರ್ಧಾರ ಬಂದಿದೆ. ತಮಿಳುನಾಡಿನಲ್ಲಿ ಆಡಳಿತದಲ್ಲಿರುವ ಡಿಎಂಕೆ ಪಕ್ಷವು ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದಡಿ ಹಿಂದಿ ಭಾಷೆ ಹೇರಿಕೆಯನ್ನು ವಿರೋಧಿಸುತ್ತಾ ಬಂದಿದೆ. ಇದರ ಭಾಗವಾಗಿ ಈಗ ಕರೆನ್ಸಿ ಸಿಂಬಲ್ ಕೂಡಾ ಬದಲಿಸಿದೆ ಎಂದು ಹೇಳಲಾಗ್ತಿದೆ.
ತಮಿಳುನಾಡು ಸರ್ಕಾರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಬಿಜೆಪಿ ವಕ್ತಾರ ನಾರಾಯಣ್ ತಿರುಪತಿ ಪ್ರತಿಕ್ರಿಯೆ ನೀಡಿ, ಡಿಎಂಕೆ ಪಕ್ಷ ಈ ಮೂಲಕ ಭಾರತದಿಂದ ತಾವು ಬೇರೆ ಎಂದು ತೋರಿಸಲು ಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. “ರೂಪಾಯಿ ಚಿಹ್ನೆ ಇಡೀ ಭಾರತಕ್ಕೆ ಒಂದೇ ಎಂದು ಅವರು ಹೇಳಿದ್ದಾರೆ.
ಸಂಸತ್ನಲ್ಲಿ ತ್ರಿಭಾಷಾ ವಿವಾದ : ತಮಿಳುನಾಡು ರಾಜ್ಯವು ಉತ್ತರ ಭಾರತದ ರಾಜ್ಯಗಳಿಗಿಂತ ಎಲ್ಲಾ ಕ್ಷೇತ್ರಗಳಲ್ಲಿ ಸುಮಾರು 40 ವರ್ಷ ಮುಂದಿದ್ದು, ತಮಿಳುನಾಡಿಗೆ ಯಾರೂ ಭಾಷೆಯನ್ನು ಕಲಿಸುವ ಪ್ರಯತ್ನ ಮಾಡಬಾರದು..” ಎಂದು ಎಂಡಿಎಂಕೆ ಸಂಸದ ಹಾಗೂ ವೈಕೋ ಪುತ್ರ ದುರೈ ವೈಕೋ ಹೇಳಿದ್ದರು. ಸಂಸತ್ತಿನಲ್ಲಿ ಭಾಷಾ ವಿವಾದದ ಕಾವು ಜೋರಾಗಿದ್ದು, ಆಡಳಿತ ಪಕ್ಷ ಮತ್ತು ತಮಿಳುನಾಡು ಸಂಸದರ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದುರೈ ವೈಕೋ ಅವರ ಹೇಳಿಕೆ ವಿವಾದ ಸೃಷ್ಟಿಸಿತ್ತು.
ಇನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಕ್ಷೇತ್ರ ಪುನರ್ವಿಂಗಡಣೆ ಮತ್ತು ತ್ರಿಭಾಷಾ ನೀತಿಯ ವಿರುದ್ಧ ಹೋರಾಡಲು ತಮಿಳುನಾಡು ಜನತೆ ಒಂದಾಗಬೇಕು ಎಂದು ಕರೆ ನೀಡಿದ್ದರು.
