ಉಕ್ರೇನ್‌ಗೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್ – ಮಿಲಿಟರಿ ನೆರವು ನಿಲ್ಲಿಸಿದ ‘ದೊಡ್ಡಣ್ಣ’ ಅಮೆರಿಕ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಬಿಗ್​ ಶಾಕ್​ ನೀಡಿದ್ದು ಮಿಲಿಟರಿ ನೆರವನ್ನು ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಶ್ವೇತಭವನದ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆ ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿಕೊಳ್ಳಲು ಉಕ್ರೇನ್ ಮೇಲೆ ಒತ್ತಡವನ್ನು ತೀವ್ರವಾಗಿ ಹೆಚ್ಚಿಸಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಯುದ್ಧಕ್ಕೆ ತ್ವರಿತ ಅಂತ್ಯ ಹಾಡಲು ಪ್ರಯತ್ನಿಸುತ್ತಿರುವ ಟ್ರಂಪ್ ನಡುವಿನ ಸಾರ್ವಜನಿಕ ಘರ್ಷಣೆಯ ಕೆಲವೇ ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕದ ಈ ನಿರ್ಧಾರವು ಉಕ್ರೇನ್‌ಗೆ ಸಂಕಷ್ಟ ತಂದೊಡ್ಡಿದೆ. ಅಮೆರಿಕದ ಶಸ್ತ್ರಾಸ್ತ್ರ ನೆರವಿನಲ್ಲಿ ಅಡಚಣೆಯಾದರೆ, ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸುವುದು ಉಕ್ರೇನ್‌ಗೆ ಭಾರೀ ಕಷ್ಟವಾಗಲಿದೆ.

ಅಮೆರಿಕ ಅಧ್ಯಕ್ಷರು ಶಾಂತಿಯತ್ತ ಗಮನಹರಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮ ಪಾಲುದಾರರು ಸಹ ಆ ಗುರಿಗೆ ಬದ್ಧರಾಗಿರಬೇಕು ಎಂದು ಅಧಿಕಾರಿ ಹೇಳಿದ್ದಾರೆ. ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ನೆರವು ಸ್ಥಗಿತಗೊಳಿಸಿದರೆ ರಷ್ಯಾದ ಮೇಲಿನ ಆಕ್ರಮಣವನ್ನು ಹಿಮ್ಮೆಟ್ಟಿಸಲು ಸಾಧ್ಯ ಎನ್ನುವುದು ಅಮೆರಿಕದ ಲೆಕ್ಕಾಚಾರವಾಗಿದೆ.

ಮಿಲಿಟರಿ ನೆರವು ಪೂರೈಕೆ ಸ್ಥಗಿತವು ತಕ್ಷಣವೇ ಜಾರಿಗೆ ಬಂದಿದೆ. ಉಕ್ರೇನ್‌ಗೆ ನೂರಾರು ಮಿಲಿಯನ್ ಡಾಲರ್‌ಗಳ ಶಸ್ತ್ರಾಸ್ತ್ರಗಳ ಪೂರೈಕೆ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : https://btvkannada.com/2025/03/04/mysore-double-murder-farmhouse/

Btv Kannada
Author: Btv Kannada

Leave a Comment

Read More

01:56