WPL ವೀಕ್ಷಣೆಗೆ ಮೆಟ್ರೋ ಸೇವೆ ವಿಸ್ತರಣೆ – RCB ಮ್ಯಾಚ್ ಟಿಕೆಟ್ ಬೆಲೆಗಿಂತ, ಮೆಟ್ರೋ ಟಿಕೆಟ್ ದರವೇ ದುಬಾರಿ!

ಬೆಂಗಳೂರು : ಮಹಿಳಾ ಪ್ರೀಮಿಯರ್ ಲೀಗ್ 2025ರ ಮೂರನೇ ಆವೃತ್ತಿ ಕಳೆದ ಶುಕ್ರವಾರದಿಂದ ಆರಂಭವಾಗಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಹಾಗೂ ಫೆ.22, 24, 25, 26, 27, 28 ಮತ್ತು ಮಾರ್ಚ್ 1ರಂದು ಪಂದ್ಯಗಳು ನಡೆಯಲಿದೆ. ಹಾಗಾಗಿ ನಮ್ಮ ಮೆಟ್ರೋ ಸೇವಾ ಅವಧಿ ವಿಸ್ತರಣೆ ಮಾಡಿದ್ದು, ಮೆಟ್ರೋ ಪ್ರಯಾಣಿಕರು ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ BMRCL ಮನವಿ ಮಾಡಿದೆ.

ಈಗಾಗಲೇ ನಮ್ಮ ಮೆಟ್ರೋ ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ನಿರೀಕ್ಷಿತ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್, WPL ಬೆಂಗಳೂರು ಪಂದ್ಯಗಳ ವೀಕ್ಷಣೆಗೆ ಮೆಟ್ರೋ ಸೇವೆಗಳ ಅವಧಿ ವಿಸ್ತರಣೆ ಮಾಡಿದೆ.

ಆದ್ರೆ, ಚಿನ್ನಸ್ವಾಮಿಯಲ್ಲಿ ಪಂದ್ಯ ವೀಕ್ಷಣೆಗೆ ಟಿಕೆಟ್ ದರ ಕೇವಲ 100 ರೂ. ಇದ್ದರೆ, ಮೆಟ್ರೋ ಕೊನೆಯ ನಿಲ್ದಾಣದಿಂದ ಬಂದು ಹೋಗೋರಿಗೆ ಮೆಟ್ರೋ ಟಿಕೆಟ್ ಖರೀದಿಸಲು 180 ರೂ. ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೊಂಚ ಮಟ್ಟಿಗೆ ಬೇಸರ ಹೊರಹಕಿದ್ದಾರೆ.

ರಾತ್ರಿ ಎಷ್ಟರವರೆಗೆ ಮೆಟ್ರೋ ಸೇವೆ ಇರಲಿದೆ? ನೇರಳೆ ಮತ್ತು ಹಸಿರು ಎರಡೂ ಮಾರ್ಗಗಳಲ್ಲಿ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದ್ದು, ಚಲ್ಲಘಟ್ಟ, ವೈಟ್‌ಫೀಲ್ಡ್, ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿಂದ ರಾತ್ರಿ 11.20ಕ್ಕೆ ಕೊನೆಯ ರೈಲು ಸೇವೆ ಇರಲಿದೆ. ಮೆಜೆಸ್ಟಿಕ್‌ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 11:55 ಕ್ಕೆ ಹೊರಡಲಿದೆ.

ಪ್ರಯಾಣಿಕರು ಮೆಟ್ರೋ ಪ್ರಯಾಣಕ್ಕಾಗಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳು (ಎನ್‌ಸಿಎಂಸಿ) ಮತ್ತು ಟೋಕನ್‌ಗಳನ್ನು ಬಳಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಇಂದಿನ ಪಂದ್ಯ : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್

ಸ್ಥಳ : ಎಂ ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು,

ಎಷ್ಟು ಗಂಟೆಗೆ ಪಂದ್ಯ ಶುರು : ಸಂಜೆ 7:30ಕ್ಕೆ

Btv Kannada
Author: Btv Kannada

Leave a Comment

Read More