KR ಪುರಂ ಫ್ಲೈ ಓವರ್​ನಲ್ಲಿ ವೀಲಿಂಗ್ ಮಾಡಿದ್ದ ಪುಂಡರು ಅರೆಸ್ಟ್..!

ಬೆಂಗಳೂರು : ರಾಮಮೂರ್ತಿನಗರ, ಕೆ.ಆರ್.ಪುರಂ ಫ್ಲೈ ಓವರ್ ಮಾರ್ಗವಾಗಿ ಸಿನಿಮೀಯ ರೀತಿಯಲ್ಲಿ ಸಾಲು ಸಾಲಾಗಿ ಬೈಕ್‌ಗಳಲ್ಲಿ ಲಾಂಗ್ ಹಿಡಿದು, ಅಪಾಯಕಾರಿ ವೀಲಿಂಗ್ ನಡೆಸಿದ್ದ ಪುಂಡರನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಯೀಮ್ ಪಾಷ , ಅರಾಫತ್, ಶಾಹಿಲ್, ನಂಜಮತ್, ಅದ್ನಾನ್ ಬಂಧಿತ ಆರೋಪಿಗಳು.

ಪೊಲೀಸರ ಭಯವೇ ಇಲ್ಲದೇ ಹತ್ತಾರು ಮಂದಿ ಪುಂಡರು ಲಾಂಗ್ ಹಿಡಿದುಕೊಂಡು ರಾಜಾರೋಷವಾಗಿ ಕಳೆದೆರಡು ದಿನಗಳ ಹಿಂದೆ ವಾಹನ ಸವಾರರಿಗೆ ಕೆ.ಆರ್.ಪುರಂ ಫ್ಲೈ ಓವರ್ ಬಳಿ ಭಯ ಬೀಳಿಸುತ್ತಿದ್ದರು. ಹವಾ ಮೆಂಟೇನ್ ಮಾಡುವುದಕ್ಕೆ ಕೈಯಲ್ಲಿ ಕತ್ತಿ, ಲಾಂಗು, ಡ್ರ್ಯಾಗರ್‌ ಹಿಡಿದು ಅಟ್ಟಹಾಸ ಮೆರೆದಿದ್ದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು.

ಈ ಬೆನ್ನಲ್ಲೇ ಪುಂಡರ ಬಂಧನಕ್ಕೆ ಕಾರ್ಯಚರಣೆ ಪ್ರಾರಂಭಿಸಿದ ಡಿಜೆ ಹಳ್ಳಿ ಪೊಲೀಸರು, ಇದೀಗ ಐವರನ್ನು ಆರೋಪಿಗಳ ಹಡೆಮುರಿಕಟ್ಟಿದ್ದಾರೆ. ಇನ್ನು ಆರೋಪಿಗಳು ಬಳಸಿದ್ದ ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದವರಿಗಾಗಿ ತನಿಖೆ ಮುಂದುವರೆದಿದೆ.

Btv Kannada
Author: Btv Kannada

Leave a Comment

Read More