ಸಿನಿಪ್ರಿಯರ ಮನಗೆದ್ದ ‘ವಿಷ್ಣುಪ್ರಿಯ’.. ಮೊದಲ ದಿನವೇ ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ!

ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಮತ್ತು ಮಲಯಾಳಂನ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯದ ವಿಷ್ಣುಪ್ರಿಯ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ‘ವಿಷ್ಣುಪ್ರಿಯಾ’ ತೊಂಭತ್ತರ ದಶಕದಲ್ಲಿ ನಡೆಯುವ ಉತ್ಕಟ ಪ್ರೇಮ ಕಥೆ ಹೇಳುವ ಚಿತ್ರ.

ಚಿತ್ರ ರಿಲೀಸ್ ಆದ ಮೊದಲ ದಿನವೇ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದು, ಈ ಅಬ್ಬರ ಇನ್ನೂ ಕಂಟಿನ್ಯೂ ಆಗೋದು ಗ್ಯಾರಂಟಿ ಎನ್ನಲಾಗ್ತಿದೆ. ಚಿತ್ರದಲ್ಲಿ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಅವರು ತುಂಬಾ ಅದ್ಭುತವಾಗಿ ನಟಿಸಿದ್ದು, ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ‘ವಿಷ್ಣುಪ್ರಿಯಾ’ದಲ್ಲಿ ಫ್ಯಾಮಿಲಿ ವ್ಯಾಲ್ಯೂಸ್​ಗೆ ಹೆಚ್ಚಿನ ಮಹತ್ವವಿದ್ದು, ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕನ ಜೀವನದಲ್ಲಿ ಏನೇನೆಲ್ಲಾ ಆಗಿಹೋಯಿತು ಅನ್ನೋದನ್ನ ಈ ಚಿತ್ರ ಹೇಳುತ್ತದೆ.

ಸಿನಿಮಾದ ರಿವ್ಯೂ ಕೂಡ ಅದ್ಭುತವಾಗಿದ್ದು, ನಟ-ನಟಿಯರು ಕೂಡ ಫುಲ್ ಖುಷಿಯಲ್ಲಿದ್ದಾರೆ. ಒಟ್ಟಾರೆ ಥಿಯೇಟರ್​ನಿಂದ ದೂರ ಉಳಿದಿದ್ದ, ಸಿನಿ ಪ್ರೇಕ್ಷಕರನ್ನು ‘ವಿಷ್ಣುಪ್ರಿಯಾ’ ವಾಪಸ್ ಕರೆಸಿದ್ದು, ಇಂಡಸ್ಟ್ರಿಯಲ್ಲಿ ಹೊಸ ಚೈತನ್ಯ ತುಂಬಿದೆ.

ಬಿಂದ್ಯಾ ಮೂವೀಸ್ ಮೂಲಕ ಈ ಚಿತ್ರವನ್ನು ಡಾ. ಕೆ.ಮಂಜು ನಿರ್ಮಿಸಿದ್ದಾರೆ. ವಿ.ಕೆ ಪ್ರಕಾಶ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ.

ಇದನ್ನೂ ಓದಿ : http://ಸಿನಿಪ್ರಿಯರ ಮನಗೆದ್ದ ‘ವಿಷ್ಣುಪ್ರಿಯ’.. ಮೊದಲ ದಿನವೇ ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ!

Btv Kannada
Author: Btv Kannada

Leave a Comment

Read More