ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್​. ಉಮೇಶ್ ವಿಧಿವಶ!

ಬೆಂಗಳೂರು : ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಎಸ್.ಉಮೇಶ್ ನಿಧನ ಹೊಂದಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಮೇಶ್‌ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ನಿರ್ದೇಶಕ ಎಸ್.ಉಮೇಶ್ ಅವರು ‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’,‌ ‘ರಾಜ ಕೆಂಪು ರೋಜ’, ‘ಅವಳೆ ನನ್ನ ಹೆಂಡ್ತಿ’, ಎಲ್ಲರಂಥಲ್ಲ ನನ್ನ ಗಂಡ ಇನ್ನೂ ಕೆಲವು ಸಿನಿಮಾಗಳನ್ನ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು.

ಎಸ್ ಉಮೇಶ್ ಅವರು ಕಳೆದ ಕೆಲ ವರ್ಷಗಳಿಂದಲೂ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದ ಎಸ್ ಉಮೇಶ್ ಅವರು 2021 ರಲ್ಲಿ ತಮಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆಯೆಂದು ಮನವಿ ಮಾಡಿದ್ದರು. ವಿಡಿಯೋ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದ ಉಮೇಶ್, ಸಹಾಯಕ್ಕಾಗಿ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದರು.

‘ಕಳೆದ ವರ್ಷ ಕೊರೊನಾ ಸಮಯದಲ್ಲಿ ನನಗೆ ಒಂದು ಕಿಡ್ನಿ ಸಮಸ್ಯೆ ಆಯ್ತು. ಎಡ ಭಾಗದ ಕಿಡ್ನಿ ಸಂಪೂರ್ಣ ವಿಫಲವಾಗಿದೆ. ಡಯಾಲಿಸಿಸ್​ ಇಲ್ಲದೇ ಕೇವಲ ಮೆಡಿಸಿನ್​ನಲ್ಲೇ ವೈದ್ಯರು ನನ್ನನ್ನು ಕಾಪಾಡಿದ್ದಾರೆ. ಡಯಾಲಿಸಿಸ್​ ಶುರುವಾದರೆ ನನ್ನ ಪರಿಸ್ಥಿತಿ ಕಷ್ಟ ಆಗುತ್ತದೆ. ಈಗ ಕೆಲಸ ಕೂಡ ಇಲ್ಲ. ನನ್ನ ಮಗ ಎಸ್​ಎಸ್​ಎಲ್​ಸಿ ಓದುತ್ತಿದ್ದಾನೆ. ಅವನ ಶಾಲೆಯ ಫೀಸ್​ ಕಟ್ಟಲು ಸಾಧ್ಯವಾಗಿಲ್ಲ. ಯಾರಾದರೂ ದಾನಿಗಳು ನನಗೆ ಸಹಾಯ ಮಾಡುವುದಾದರೆ ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದು ಉಮೇಶ್​ ಅವರು ಕೋರಿದ್ದರು.

ಇದನ್ನೂ ಓದಿ : http://ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್​. ಉಮೇಶ್ ವಿಧಿವಶ!

Btv Kannada
Author: Btv Kannada

Leave a Comment

Read More