ಸಬ್‌ರಿಜಿಸ್ಟ್ರಾರ್‌ಗಳ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್!

ಬೆಂಗಳೂರು : ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಳೆದ ಡಿ.10ರಂದು ಮಾಡಿದ್ದ 90 ಅಧಿಕಾರಿಗಳ ಕೌನ್ಸೆಲಿಂಗ್ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ವಿಧಿಸಿದೆ.

ವರ್ಗಾವಣೆ ಆದೇಶ ಪ್ರಶ್ನಿಸಿ ಉಪ ನೋಂದಣಾಧಿಕಾರಿಗಳು ಕೆಎಟಿ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೆಎಟಿ, ವರ್ಗಾವಣೆ ಆದೇಶ ಒಪ್ಪಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಬ್‌ರಿಜಿಸ್ಟ್ರಾರ್‌ಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ, 2024ರ ಡಿ.10ರಂದು 90 ಹಿರಿಯ, ಕಿರಿಯ ಸಬ್‌ರಿಜಿಸ್ಟ್ರಾರ್‌ಗಳ ವರ್ಗಾವಣೆಗೊಳಿಸಿ ಕಂದಾಯ ಇಲಾಖೆ ಹೊರಡಿಸಿದ್ದ ಅಧಿಸೂಚನೆಗೆ ತಡೆಯಾಜ್ಞೆ ನೀಡಿದೆ. ಜತೆಗೆ ಡಿ.21ರಂದು ಹೊರಡಿಸಿದ್ದ ಚಲನಾದೇಶ ಮತ್ತು ಡಿ.23ರ ತಿದ್ದುಪಡಿ ಚಲನಾದೇಶಕ್ಕೂ ತಡೆ ನೀಡಿದೆ.

ಇದೀಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೌನ್ಸೆಲಿಂಗ್ ವರ್ಗಾವಣೆಗೆ ತಡೆಯಾಜ್ಞೆ ಆಗಿದ್ದು, ಈ ಆದೇಶದಂತೆ ಡಿ.10ಕ್ಕೂ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಸಬ್‌ರಿಜಿಸ್ಟ್ರಾರ್‌ಗಳು ವಾಪಸ್ ಹೋಗಬೇಕಾಗಿದೆ.

Btv Kannada
Author: Btv Kannada

Leave a Comment

Read More