ಅನ್ನಭಾಗ್ಯ : ಇನ್ಮುಂದೆ ಹಣದ ಬದಲು 10 ಕೆಜಿ ಅಕ್ಕಿ ಕೊಡಲು ರಾಜ್ಯ ಸರ್ಕಾರ ನಿರ್ಧಾರ!

ಬೆಂಗಳೂರು : ಅನ್ನಭಾಗ್ಯ ಯೋಜನೆ ಅಡಿ ಇನ್ನು ಮುಂದೆ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಸಿಗಲಿದೆ. ಇಷ್ಟು ದಿನ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ. ಕೊಡ್ತಿದ್ದ ಸರ್ಕಾರ ಇನ್ನು ಮುಂದೆ ಹಣದ ಬದಲಾಗಿ 10 ಕೆಜಿ ಅಕ್ಕಿಯೇ ನೀಡಲಿದೆ ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಈ ತಿಂಗಳಿಂದಲೇ 10 ಕೆಜಿ ಅಕ್ಕಿ ಹಂಚಿಕೆಯಾಗಲಿದೆ.

ವಿಧಾನಸೌಧದಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಇಷ್ಟು ದಿನ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಒಪ್ಪದೇ ಇರೋದ್ರೀಂದ 5 ಕೆಜಿ ಅಕ್ಕಿ ಮತ್ತು 5 ಕೆಜಿಗೆ ಹಣ ಕೊಡ್ತಿದ್ವಿ. ಈಗ ಕೇಂದ್ರ ಸರ್ಕಾರ 22.50 ರೂಪಾಯಿ ಕಡಿಮೆ ಬೆಲೆಯಲ್ಲಿ ಅಕ್ಕಿ ಕೊಡಲು ‌ಒಪ್ಪಿದೆ. ಹೀಗಾಗಿ ಇನ್ನು ಮುಂದೆ 10 ಕೆಜಿ ಅಕ್ಕಿ ಕೊಡೋದಾಗಿ ಸ್ಪಷ್ಟಪಡಿಸಿದ್ದಾರೆ.

ನಮಗೆ ಪ್ರತಿ ತಿಂಗಳು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಇದಕ್ಕಾಗಿ 536.71 ಕೋಟಿ ಹಣ ಖರ್ಚಾಗಲಿದೆ. ಈ ಹಣ ನಾವು ಕೇಂದ್ರಕ್ಕೆ ಕೊಡಲು ಒಪ್ಪಿದ್ದೇವೆ. ರಾಜ್ಯದಲ್ಲಿ ಸುಮಾರು 1.53 ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್ ಇದ್ದು, 4.50 ಕೋಟಿ ಜನರಿಗೆ ಅಕ್ಕಿ ಕೊಡ್ತಿದ್ದೇವೆ. ಸಾಗಣೆ ವೆಚ್ಚವೂ ಸೇರಿ 25 ರೂ.ಗೆ ನಮಗೆ ಅಕ್ಕಿ ಸಿಗಲಿದೆ. ಹಣದ ಬದಲಾಗಿ ಅಕ್ಕಿ ಕೊಡೋದ್ರೀಂದ ಸರ್ಕಾರಕ್ಕೆ ಪ್ರತಿ ತಿಂಗಳು 150 ರಿಂದ 190 ಕೋಟಿ ರೂ. ಉಳಿತಾಯವಾಗಲಿದೆ ಎಂದು ಸಚಿವರು ತಿಳಿಸಿದರು.

ಹಣದ ಬದಲು ಅಕ್ಕಿ ಕೊಟ್ಟರೆ ಅನ್ನಭಾಗ್ಯ ಯೋಜನೆ ಖರ್ಚು ವೆಚ್ಚ ಎಷ್ಟು?

>. ಕರ್ನಾಟಕಕ್ಕೆ ಅಗತ್ಯ ಇರುವ ಅಕ್ಕಿ 2.10 ಲಕ್ಷ ಮೆಟ್ರಿಕ್ ಟನ್
>. ಒಟ್ಟು 1,16,39,179 ಕಾರ್ಡ್ ಗಳು, 4,12,16,838 ಮಂದಿ ಫಲಾನುಭವಿಗಳು
>. ಎಫ್‌ಸಿಐನಿಂದ 22 ರೂ. 50 ಪೈಸೆಗೆ ಅಕ್ಕಿ ಖರೀದಿಸಲಿರುವ ರಾಜ್ಯ ಸರ್ಕಾರ
>. ಸಾಗಾಣಿಕಾ ವೆಚ್ಚ ಸೇರಿಸಿದ್ರೆ ಪ್ರತಿ ಕೆಜಿ ಅಕ್ಕಿಗೆ ಒಟ್ಟು 25 ರೂಪಾಯಿ ಅಂದಾಜು ವೆಚ್ಚ
>. ಈ ಹಿಂದೆ ಅನ್ನಭಾಗ್ಯಕ್ಕೆ ತಿಂಗಳಿಗೆ 890 ಕೋಟಿ ವೆಚ್ಚ, ವರ್ಷಕ್ಕೆ 10,092 ಕೋಟಿ ವೆಚ್ಚ
>. 5 ಕೆಜಿ ಅಕ್ಕಿಗೆ ಬದಲಾಗಿ ಪ್ರತಿ ಫಲಾನುಭವಿಗೆ ಖಾತೆಗೆ ತಿಂಗಳಿಗೆ 170 ರೂಪಾಯಿ ಜಮೆ ಮಾಡ್ತಿದ್ದ ಸರ್ಕಾರ
>. ಈಗ ಅಕ್ಕಿ ಕೊಟ್ಟರೆ ಸರ್ಕಾರಕ್ಕೆ ಪ್ರತಿ ತಿಂಗಳಿಗೆ 537 ಕೋಟಿ, ವರ್ಷಕ್ಕೆ 6,444 ಕೋಟಿ ವೆಚ್ಚ
>. ಪ್ರತಿ ಫಲಾನುಭವಿಯಿಂದ 50 ರೂಪಾಯಿ ಉಳಿತಾಯ
>. ತಿಂಗಳಿಗೆ ಅಂದಾಜು 150 ರಿಂದ 190 ಕೋಟಿ ರೂ., ವಾರ್ಷಿಕ 1,600 ರಿಂದ 2,000 ಕೋಟಿ ಉಳಿತಾಯ.

Btv Kannada
Author: Btv Kannada

Leave a Comment

Read More