ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ.. ರಾಜ್ಯಕ್ಕೆ ಬೇಕಾಗುವಷ್ಟು ವಿದ್ಯುತ್ ಇದೆ – ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ!

ನೆಲಮಂಗಲ : ಬೇಸಿಗೆ ಆರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿ ವಿದ್ಯುತ್​ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ವಿದ್ಯುತ್ ಪೂರೈಕೆ ಡಿಮಾಂಡ್ ವಿಚಾರ ಸಂಬಂಧ ಸಚಿವ ಕೆ.ಜೆ ಜಾರ್ಜ್​ ಪ್ರತಿಕ್ರಿಯಿಸಿ, ಈಗಾಗಲೇ 19500 ಮ್ಯಾಗಾವ್ಯಾಟ್ ತಲುಪಿದೆ ಎಲ್ಲಾ ಸಿದ್ಧತೆಯಾಗಿದೆ. ಪವರ್ ಸಮಸ್ಯೆ ಇಲ್ಲ ಹಾಗೂ ಯಾವುದೇ ಲೋಡ್ ಶೆಡ್ಡಿಂಗ್ ಸಮಸ್ಯೆ ಇಲ್ಲ ಎಂದಿದ್ದಾರೆ.

ಈ ಬಗ್ಗೆ ನೆಲಮಂಗಲದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್​ ಮಾತನಾಡಿ, 10 ಲಕ್ಷ ಕಿಲೋಮೀಟರ್ ಲೈನ್ ವ್ಯವಸ್ಥೆ ಇದೆ, 6 ಲಕ್ಷ ಟ್ರಾನ್ಸ್ ಫಾರಮ್ ಇವೆ. ಒಮ್ಮೊಮ್ಮೆ ಲೈನ್ ರಿಪೇರಿ ಬರುತ್ತೆ ಆಗ ಜನ ಕರೆಂಟ್ ಇಲ್ಲ ಅಂತಾರೆ ನಮಗೆ ಬೇಕಾದ ಕರೆಂಟ್ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ಗೃಹಲಕ್ಷ್ಮೀ ಹಣ ತಿಂಗಳ ಸಂಬಳ ಅಲ್ಲ ಎಂಬ ಹೇಳಿಕೆ ಸಂಬಂಧ ಮಾತನಾಡಿ, ಸಂಬಳ ಕೊಡೋದಾದ್ರೆ 31 ಅಥವಾ 1ನೇ ತಾರೀಖು ಕೊಡಬೇಕಾಗುತ್ತದೆ, ಸೋಶಿಯಲ್ ವೆಲ್ ಫೇರ್ ಕೆಲಸಗಳಲ್ಲಿ 15-20 ದಿನ ತಡ ಆಗಬಹುದು. ನಮಗೆ ತೆರಿಗೆ ಬಂದಾಗ ನಾವು ಕೊಡುತ್ತಿದ್ದೇವೆ ಇಯರ್ ಎಂಡ್ ಸಮಯದಲ್ಲಿ ಎಲ್ಲಾ ಬರುತ್ತೆ ಎಂದಿದ್ದಾರೆ.

ಇನ್ನು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ರಾಜ್ಯದ ಜನ ಅಲ್ವ ನಾನು ಭಿಕ್ಷುಕ ಅಂದ್ರೆ ನಾನು ಭಿಕ್ಷುಕ ಅಲ್ವ. ಸಂಬಳ ಕೊಡುವವರಿಗೆ ಇಂತಹ ಡೇಟ್ ಇರುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : http://ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ.. ರಾಜ್ಯಕ್ಕೆ ಬೇಕಾಗುವಷ್ಟು ವಿದ್ಯುತ್ ಇದೆ – ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ!

Btv Kannada
Author: Btv Kannada

Leave a Comment

Read More