ಕುಂಭ ಸ್ನಾನದಿಂದ ಆರೋಗ್ಯ ಸಮಸ್ಯೆ? ತ್ರಿವೇಣಿ ಸಂಗಮ ನೀರಿನಲ್ಲಿ ಮಿತಿ ಮೀರಿದ ಮಲ ಬ್ಯಾಕ್ಟೀರಿಯ ಪತ್ತೆ!

ಪ್ರಯಾಗ್‌ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ದೇಶದ ಮೂಲೆ ಮೂಲೆಗಳಿಂದ ಹಿಡಿದು, ವಿದೇಶಗಳಿಂದಲೂ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಫೆಬ್ರವರಿ 26ರಂದು ಮಹಾ ಶಿವರಾತ್ರಿ ದಿನ ಮಹಾಕುಂಭ ಮೇಳ ಮುಕ್ತಾಯಗೊಳ್ಳಲಿದ್ದು, ಈಗಾಗಲೇ ಕೋಟಿ ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. 

144 ವರ್ಷಗಳಿಗೊಮ್ಮೆ ಬರುವ ಈ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವುದೇ ಒಂದು ಪುಣ್ಯದ ಕೆಲಸ ಎಂದು ಜನ ಭಾವಿಸಿದ್ದಾರೆ. ಆದರೆ, ವಿಜ್ಞಾನಿಗಳು ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ನಾವೆಲ್ಲ ಶುದ್ಧ ನೀರು ಅಂದ್ಕೊಂಡಿದ್ದ ತ್ರಿವೇಣಿ ಸಂಗಮದ ನೀರು ಕಲುಶಿತ ನೀರು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮಾಡಿದೆ.

ಗಂಗಾ ಸ್ನಾನವನ್ನು ಪುಣ್ಯ ಸ್ನಾನವೆಂದು ನಂಬಲಾಗಿದೆ. ಎಲ್ಲ ಪಾಪಗಳನ್ನು ತೊಳೆಯುವ ಹಾಗೆಯೇ ಆರೋಗ್ಯ ವೃದ್ಧಿಗಾಗಿ ಜನರು ಗಂಗೆಯಲ್ಲಿ ಮಿಂದೆದ್ದು ಬರ್ತಾರೆ. ಅದ್ರಲ್ಲೂ ಮಹಾ ಕುಂಭ ಮೇಳದ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ಅತ್ಯಂತ ಪುಣ್ಯದ ಕೆಲಸ ಎಂದೇ ನಂಬಲಾಗಿದೆ. ಗಂಗೆ ನೀರನ್ನು ಅತ್ಯಂತ ಶುದ್ಧ ನೀರು ಎಂದು ವಿಜ್ಞಾನಿಗಳು ನಂಬುತ್ತಾರೆ. ಅದನ್ನು ಬಾಟಲಿಯಲ್ಲಿ ಹಾಕಿ ಎಷ್ಟು ವರ್ಷವಿಟ್ರೂ ಹಾಳಾಗುವುದಿಲ್ಲ, ಬ್ಯಾಕ್ಟೀರಿಯಾ, ವೈರಲ್ ಈ ನೀರಿನಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದು ಈ ಹಿಂದೆ ವಿಜ್ಞಾನಿಗಳು ತಿಳಿಸಿದ್ದರು. ಆದ್ರೀಗ ಪ್ರಯಾಗರಾಜ್​ನ ನೀರು ಕಲುಶಿತಗೊಂಡಿದೆ ಎಂಬ ವರದಿ ಬಂದಿದೆ.  

ಕೋಟಿ ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದು, ಈಗ ಆ ನೀರಿನಲ್ಲಿ  ಫೆಕಲ್ ಕೋಲಿಫಾರ್ಮ್ ಹೆಸರಿನ ಬ್ಯಾಕ್ಟೀರಿಯಾ ಬೆಳೆದಿದೆ. ಈ ಬ್ಯಾಕ್ಟೀರಿಯಾ ಮನುಷ್ಯನ ಮತ್ತು ಪ್ರಾಣಿಯ ಮಲದಲ್ಲಿ ಮತ್ತು ಒಳಚರಂಡಿ ನೀರಿನಲ್ಲಿ ಕಂಡು ಬರುತ್ತದೆ.  100 ಮಿಲಿ ಸ್ನಾನದ ನೀರಿನಲ್ಲಿ ಗರಿಷ್ಠ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ 2500 ಯೂನಿಟ್‌ ಇರುತ್ತದೆ. ಆದ್ರೆ ತ್ರಿವೇಣಿ ಸಂಗಮದಲ್ಲಿ ಇದ್ರ ಸಂಖ್ಯೆ ಮತ್ತೂ ಹೆಚ್ಚಿದೆ ಎಂದು ವರದಿ ಮಾಡಲಾಗಿದೆ. 

ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಅನೇಕ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುವ ಒಂದು ಗುಂಪು. ಮನುಷ್ಯ ಹಾಗೂ ಪ್ರಾಣಿ ಕರುಳು ಮತ್ತು ಮಲದಲ್ಲಿ ಕಂಡು ಬರುವ ಈ ಬ್ಯಾಕ್ಟೀರಿಯಾ ಇದಾಗಿದ್ದು, ಯಾವುದೇ ಅಪಾಯಕಾರಿ ರೋಗವನ್ನು ಇದು ಉಂಟು ಮಾಡೋದಿಲ್ಲವಾದ್ರೂ ಇದು ನೀರಿನ ಗುಣಮಟ್ಟ ಹಾಳು ಮಾಡುವ ಕಾರಣ, ದೀರ್ಘ ಸಮಯದಲ್ಲಿ ಸಾಕಷ್ಟು ಸಮಸ್ಯೆ ಕಾಡುವ ಅಪಾಯವಿದೆ. 

ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರು ಕುಂಭಮೇಳದಿಂದ ವಾಪಸ್ ಆದ ಜನರಿಗೆ ಯಾವೆಲ್ಲ ಸಮಸ್ಯೆ ಕಾಡ್ತಿದೆ ಎಂಬುದನ್ನು ಹೇಳಿದ್ದಾರೆ. ಆರಂಭದಲ್ಲಿ ಈ ಸಮಸ್ಯೆ ಜನಸಂದಣಿಯಿಂದ ಬರ್ತಿದೆ ಎಂದು ಭಾವಿಸಲಾಗಿತ್ತು. ನಂತ್ರ ನೀರಿನಿಂದ ಎಂಬುದು ಪತ್ತೆಯಾಗ್ತಿದೆ.

Btv Kannada
Author: Btv Kannada

Leave a Comment

Read More