ಬೆಂಗಳೂರು : ಎರಡು ಅಂತಸ್ತಿನ ಕಟ್ಟಡ ದಿಢೀರ್ ಕುಸಿದಿರುವ ಘಟನೆ ಬೆಂಗಳೂರಿನ ತಿಪ್ಪಸಂದ್ರದಲ್ಲಿ ನಡೆದಿದೆ. ಸಂಜೆ 5 ಗಂಟೆ ಸುಮಾರಿಗೆ ಮನೆಯ ಬೇಸ್ಮೆಂಟ್ ಕುಸಿದಿದ್ದು, ಅದೃಷ್ಟವಶಾತದ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಜೀವನ್ ಭೀಮಾನಗರ ಪೊಲೀಸರು & ಅಗ್ನಿ ಶಾಮಕದಳ ದೌಡಾಯಿಸಿದ್ದರು. ನಂತರ ಅಗ್ನಿಶಾಮಕದಳ ಸಿಬ್ಬಂದಿಗಳು ಕಟ್ಟಡ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
Author: Btv Kannada
Post Views: 881









