ಸೌತ್​ ಕೊರಿಯಾದ ನಟಿ ಕಿಮ್ ಸೆ-ರಾನ್ ನಿಗೂಢ ಸಾವು.. 24 ವರ್ಷದ ಬ್ಯೂಟಿಗೆ ಆಗಿದ್ದೇನು?

ಸೌತ್​ ಕೊರಿಯಾದ ಫೇಮಸ್ ನಟಿ ​ಕಿಮ್ ಸೆ-ರಾನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬ್ಲಡ್ಹೌಂಡ್ಸ್ ಟಿವಿ ಸೀರಿಸ್‌ ಮತ್ತು ದಿ ಮ್ಯಾನ್ ಫ್ರಮ್ ನೋವೇರ್‌ನ ಖ್ಯಾತಿಯ ಕಿಮ್ ಸೆ-ರಾನ್, ಕೇವಲ 24 ವರ್ಷಕ್ಕೆ ನಿಗೂಢವಾಗಿ ಪ್ರಾಣ ಬಿಟ್ಟಿದ್ದಾರೆ.

ಸೌತ್​ ಕೊರಿಯಾದ ಸಿಯೋಲ್‌ನಲ್ಲಿರುವ ಮನೆಯಲ್ಲೇ ನಟಿಯ ಶವ ಪತ್ತೆಯಾಗಿದೆ. ಕಿಮ್ ಸೆ-ರಾನ್ ಸಾವು ಅನುಮಾನಾಸ್ಪದವಾಗಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ವರದಿಗಳ ಪ್ರಕಾರ ಕಿಮ್ ಸೆ-ರಾನ್ ಅವರ ಸ್ನೇಹಿತ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಆಕೆಯ ಸಂಪರ್ಕ ಸಾಧ್ಯವಾಗಿಲ್ಲ. ಅನುಮಾನಗೊಂಡ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ನಟಿ ಕಿಮ್ ಸೆ-ರಾನ್ ಸಾವನ್ನಪ್ಪಿರುವ ಮನೆಯಲ್ಲಿ ಯಾವುದೇ ಗುರುತುಗಳು ಪತ್ತೆಯಾಗಿಲ್ಲ. ಕೊಲೆಗಾರನ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ತನಿಖೆಯು ದೊಡ್ಡ ಸವಾಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕಿಮ್ ಸೆ-ರಾನ್ ಅವರು ಬಾಲ್ಯನಟಿಯಾಗಿಯೇ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದರು. 2009ರಲ್ಲಿ ತೆರೆಗೆ ಬಂದಿದ್ದ ಎ ಬ್ರ್ಯಾಂಡ್ ನ್ಯೂ ಲೈಫ್ ಸೆ-ರಾನ್ ಅಭಿನಯದ ಮೊದಲ ಚಿತ್ರ. 2010ರಲ್ಲಿ ದಿ ಮ್ಯಾನ್ ಫ್ರಮ್ ನೋವೇರ್‌ ಇವರಿಗೆ ಅತಿ ದೊಡ್ಡ ಯಶಸ್ಸು ತಂದು ಕೊಟ್ಟಿತ್ತು. ಕಡಿಮೆ ವಯಸ್ಸಿನಲ್ಲಿ ಬಹಳ ಬೇಗ ಖ್ಯಾತಿ ಗಳಿಸಿದ್ದ ಕಿಮ್ ಸೆ-ರಾನ್ ಇತ್ತೀಚೆಗೆ ಫೇಮಸ್‌ ಟಿವಿ ಸೀರಿಸ್ ಬ್ಲಡ್ಹೌಂಡ್ಸ್‌ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.

Btv Kannada
Author: Btv Kannada

Leave a Comment

Read More