“ರಾಜು ಜೇಮ್ಸ್ ಬಾಂಡ್” ಸಿನಿಮಾಗೆ ಡಿಕೆಶಿ ವಿಶ್ – ಭರ್ಜರಿ ಹಿಟ್ ಬೆನ್ನಲ್ಲೇ ಚಿತ್ರ ವೀಕ್ಷಿಸಲಿರುವ ಡಿಸಿಎಂ!

ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಾಯಕನಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರಕ್ಕೆ ಸಿನಿಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಾಜು ಜೇಮ್ಸ್ ಬಾಂಡ್ 2025ರ ಮೊದಲ ಕಾಮಿಡಿ‌ ಹಿಟ್ ಸಿನಿಮಾವಾಗಿದೆ.

ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ವ್ಯಕ್ತವಾಗಿರುವ ಉತ್ತಮ ಪ್ರತಿಕ್ರಿಯೆ ಕೇಳಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಚಿತ್ರತಂಡವನ್ನ ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲದೆ ಡಿಕೆಶಿ ಅವರು ಕೂಡ ರಾಜು ಜೇಮ್ಸ್ ಬಾಂಡ್ ಚಿತ್ರವನ್ನ ವೀಕ್ಷಿಸಲಿದ್ದಾರೆ.

ಕಾಮಿಡಿ ಜೊತೆ ಉತ್ತಮ ಕಥೆ ಹೊಂದಿರುವ ಈ ಚಿತ್ರ ಪ್ರೇಕ್ಷಕರಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡಿದೆ. ರಾಜು ಜೇಮ್ಸ್ ಬಾಂಡ್ ರಿಲೀಸ್ ಆಗಿ 3ದಿನವಾಗಿದ್ದು, ಬಹುತೇಕ ರಾಜ್ಯದ ಎಲ್ಲಾ ಥಿಯೇಟರ್​ಗಳಲ್ಲಿ ಈ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ ಈ ಚಿತ್ರದ ನಾಯಕನಾಗಿ ಗುರುನಂದನ್ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ : http://ಶಿವಕಾರ್ತಿಕೇಯನ್-ಮುರುಗದಾಸ್ ಹೊಸ ಸಿನಿಮಾಗೆ ‘ಮದರಾಸಿ’ ಟೈಟಲ್ ಫಿಕ್ಸ್!

Btv Kannada
Author: Btv Kannada

Leave a Comment

Read More