ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಟನೆಯ “ರಾಜು ಜೇಮ್ಸ್ ಬಾಂಡ್” ಚಿತ್ರ ಪ್ರೇಮಿಗಳ ದಿನದಂದು ತೆರೆಗೆ ಬಂದಿದ್ದು, ಸಿನಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ದೀಪಕ್ ಮಧುವನಹಳ್ಳಿ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿಯಲ್ಲಿ ಗುರುನಂದನ್ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ.
ರಾಜು ಜೇಮ್ಸ್ ಬಾಂಡ್ ರಿಲೀಸ್ ಆಗಿ 2ದಿನವಾಗಿದ್ದು, ಬಹುತೇಕ ರಾಜ್ಯದ ಎಲ್ಲಾ ಥಿಯೇಟರ್ಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ನಾಯಕ ಜೇಮ್ಸ್ ಬಾಂಡ್ ಹೇಗೆ ಆಗುತ್ತಾನೆ ಎನ್ನುವುದೇ ಸಿನಿಮಾದ ಎಳೆಯಾಗಿದೆ.
ಬ್ಯಾಂಕ್ ಮ್ಯಾನೇಜರ್ ಆಗೋ ಕನಸಿನ ಚುಂಗು ಹಿಡಿದು ಹೊರಡೋ ಸಾಮಾನ್ಯ ಹುಡುಗನೊಬ್ಬ ಆ ದಾರಿಯಲ್ಲಿ ಎದುರಿಸೋ ವಿಶಿಷ್ಟ ಸವಾಲುಗಳು, ಅದನ್ನೆಲ್ಲ ಮೀರಿಕೊಂಡು ಊರ ಮಂದಿಯ ಪಾಲಿಗೆ ಆತ ಹೇಗೆ ಜೇಮ್ಸ್ ಬಾಂಡ್ ಆಗುತ್ತಾನೆಂಬುದರ ಸುತ್ತಾ ಪಕ್ಕಾ ಮನೋರಂಜನೆಯ ಧಾಟಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ.
ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ ಈ ಚಿತ್ರದ ನಾಯಕನಾಗಿ ಗುರುನಂದನ್ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ “ರಾಜು ಜೇಮ್ಸ್ ಬಾಂಡ್” ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ : http://ಬೆಳಗಾವಿ : ಆಟೋಗೆ ಕಾರು ಟಚ್ ಆಗಿದ್ದಕ್ಕೆ ಗೋವಾ ಮಾಜಿ ಶಾಸಕನ ಹತ್ಯೆ!









