ಬೆಳಗಾವಿ : ಆಟೋ ಚಾಲಕನೊಬ್ಬ ಕ್ಷುಲ್ಲಕ ಕಾರಣಕ್ಕೆ ಗೋವಾ ಮಾಜಿ ಶಾಸಕರನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ನಿನ್ನೆ ಬೆಳಗಾವಿಯಲ್ಲಿ ನಡೆದಿದೆ.
ಪೋಂಡಾ ಕ್ಷೇತ್ರದ ಶಾಸಕರಾಗಿದ್ದ 68 ವರ್ಷದ ಲಾವೂ ಮಾಮಲೇದಾರ್ ಹತ್ಯೆಯಾಗಿದ್ದು, ಇವರು ಗೋವಾದ ಕಾಂಗ್ರೆಸ್ ಮುಖಂಡರಾಗಿದ್ದರು. ಖಡೇಬಜಾರ್ನಲ್ಲಿರುವ ಶ್ರೀನಿವಾಸ ಲಾಡ್ಜ್ ಮುಂದೆ ಈ ಭೀಕರ ಘಟನೆ ನಡೆದಿದ್ದು, ಲಾವೂ ಮಾಮಲೇದಾರ್ ಮೇಲೆ ಆಟೋ ಚಾಲಕ ಏಕಾಏಕಿ ದಾಳಿ ಮಾಡಿದ್ದಾನೆ.
ಜಗಳದಲ್ಲಿ ಗಂಭೀರವಾಗಿ ಪೆಟ್ಟು ತಿಂದಿದ್ದ ಲಾವೋ ಮಾಮಲೇದಾರ್ ಅವರು ಲಾಡ್ಜ್ಗೆ ಹೋಗುವಾಗ ಮೆಟ್ಟಿಲು ಏರಲಾಗದೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆಟೋ ಚಾಲಕ ಮುಜಾಹಿದ್ ಶಕೀಲ್ ಸನದಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಲಾವೂ ಮಾಮಲೇದಾರ್ ಮೃತದೇಹ ಬೆಳಗಾವಿ ಬಿಮ್ಸ್ಗೆ ರವಾನೆ ಮಾಡಲಾಗಿದೆ. ಲಾವೋ ಮಾಮಲೇದಾರ್ ಸಾವಿಗೆ ಗೋವಾ ಕಾಂಗ್ರೆಸ್ ಸಂತಾಪ ಸೂಚಿಸಿದೆ.
ಇದನ್ನೂ ಓದಿ : http://ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – 15 ಜನರ ದುರ್ಮರಣ!









