ಧನಂಜಯ್-ಧನ್ಯತಾ ಮದುವೆ ಸಂಭ್ರಮ – ಅರಿಶಿನದಲ್ಲಿ ಮಿಂದೆದ್ದ ನವಜೋಡಿ.. ಇಲ್ಲಿದೆ ಫೋಟೋಸ್!

ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆ ಸಂಭ್ರಮ ಶುರುವಾಗಿದೆ. ಭಾನುವಾರ ಮೈಸೂರಿನಲ್ಲಿ ಧನ್ಯ ಕೊರಳಿಗೆ ಧನು ಮಾಂಗಲ್ಯಧಾರಣೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಮುದುವೆ ಶಾಸ್ತ್ರಗಳು ಶುರುವಾಗಿದೆ. ಶಾಸ್ತ್ರೋಕ್ತವಾಗಿ ಅಷ್ಟೇ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಯಲಿದ್ದು, ಇದೀಗ ಅರಿಶಿನದಲ್ಲಿ ನವಜೋಡಿ ಮಿಂದೆದ್ದಿದೆ.

ನಂಜನಗೂಡು ಬಳಿಯ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ಧನು-ಧನ್ಯತಾ ಅರಿಶಿನ ಶಾಸ್ತ್ರ ನಡೆದಿದೆ. ಆಪ್ತರು, ಕುಟುಂಬದವರು, ಸಿನಿಮಾ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದು, ಮುದ್ದಾದ ಜೋಡಿಗೆ ಶುಭ ಹಾರೈಸಿದ್ದಾರೆ. ಸದ್ಯ ಧನು-ಧನ್ಯತಾ ಅರಿಶಿನ ಶಾಸ್ತ್ರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇಂದು ಮತ್ತೆ ನಾಳೆ ಮೈಸೂರಿನಲ್ಲಿ ಧನಂಜಯ್ -ಧನ್ಯತಾ ಕಲ್ಯಾಣ ಅದ್ಧೂರಿಯಾಗಿ ನಡೆಯಲಿದೆ.ಮದುವೆ ಸಮಾರಂಭಕ್ಕೆ ಸ್ಯಾಂಡಲ್​ವುಡ್ ಗಣ್ಯರು ಹಾಗೂ ಅನೇಕ ರಾಜಕೀಯ ನಾಯಕರು ಬರುವ ನಿರೀಕ್ಷೆ ಇದೆ. ಜೊತೆಗೆ ಟಾಲಿವುಡ್ ಮಂದಿ ಕೂಡ ಮದುವೆ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಇನ್ನು ಇನ್ ಲ್ಯಾಂಡ್ ಲೆಟರ್ ಮಾದರಿಯಲ್ಲಿದ್ದ ಧನಂಜಯ್-ಧನ್ಯತಾ ಮದುವೆ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆದಿತ್ತು. ಸಿಂಪಲ್ ಮದುವೆ ಪತ್ರಿಕೆ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಧನಂಜಯ್ ಮದುವೆ ಆಮಂತ್ರಣಕ್ಕೆ ಭಾರತೀಯ ಅಂಚೆ ಇಲಾಖೆ ಕೂಡ ಫಿದಾ ಆಗಿತ್ತು.

ಧನಂಜಯ್-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದ ಅಂಚೆ ಇಲಾಖೆ, ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷವಾಗಿರುವ 12 ಸ್ಟ್ಯಾಂಪ್​ಗಳನ್ನ ಉಡುಗೊರೆಯಾಗಿ ನೀಡಿದೆ. ಮೈಸೂರು ಅಂಚೆ ವಿಭಾಗದ ಅಧಿಕಾರಿಗಳು ಧನಂಜಯ್ ಅವರನ್ನು ಭೇಟಿಯಾಗಿ ಈ ಗಿಫ್ಟ್ ನೀಡಿದ್ದಾರೆ.

Btv Kannada
Author: Btv Kannada

Leave a Comment

Read More