ಮೊನ್ನೆಯಷ್ಟೇ ಪ್ರೊಡಕ್ಷನ್ ನಂ-01 ಅನ್ನೋ ಹೆಸರಲ್ಲಿ ಥೀಮ್ ಪೋಸ್ಟರ್ ಬಿಟ್ಟು ಹುಳ ಬಿಟ್ಟಿದ್ದ ನಟ, ನಿರ್ದೇಶಕ ಅನೀಶ್ ಈಗ ಅದಕ್ಕೆ ಲವ್ OTP ಅಂತ ಹೆಸರಿಟ್ಟು ಟೈಟಲ್ ಅನೌನ್ಸ್ ಮಾಡಿದ್ದಾರೆ.

Over Tourcher Pressure ಅನ್ನೋ ಅಡಿ ಬರಹವಿರುವ ಲವ್ OTP 2025ರ ನವಯುವ ಪ್ರೇಮ ಕಾವ್ಯ ಎಂದು ಹೇಳಲಾಗುತ್ತಿದೆ. ಈ ತಲೆಮಾರಿನ ಇವತ್ತಿನ ಯುವ ಮನಸುಗಳ ಕನಸುಗಳ ರಿಯಾಲಿಟಿಯನ್ನು ತೆರೆದಿಡುವ ಕಥಾ ಹಂದರವಿರುವ ಸಿನಿಮಾ ಲವ್ OTP ಆಗಿದೆ.

‘ಆರಾಮ್ ಅರವಿಂದ ಸ್ವಾಮಿ’ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಪ್ರೀತಿ ಹಾಗೂ ಬೆಂಬಲದ ಬೆನ್ನಿಗೆ ಅನೀಶ್ ಸದ್ದಿಲ್ಲದೇ ಲವ್ OTP ಶುರು ಮಾಡಿದ್ದಾರೆ. ನಿರ್ದೇಶನದ ಜೊತೆ ನಟನೆ ಮಾಡುತ್ತಿರುವ ಅನೀಶ್ಗೆ ಭಾವಪ್ರೀತ ಪ್ರೊಡಕ್ಷನ್ನ ಎಂ.ವಿಜಯ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೂಲಕ ವಿಜಯ್ ರೆಡ್ಡಿ ಅನ್ನೋ ನಿರ್ಮಾಪಕ ಕನ್ನಡ ಚಿತ್ರದ್ಯೋಮಕ್ಕೆ ಕಾಲಿಡ್ತಿದ್ದಾರೆ.

ಸದ್ಯಕ್ಕೆ ಇಷ್ಟು ಮಾತ್ರ ಬಿಟ್ಟುಕೊಟ್ಟಿರೋ ಅನೀಶ್ ಚಿತ್ರದ ಒಂದೊಂದು ವಿಚಾರವನ್ನ ಇಲ್ಲಿಂದ ಬಿಟ್ಟುಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ : https://limegreen-sparrow-685605.hostingersite.com/2025/02/15/dhanu-dhanya-wedding-grand-dinner/









