ಬಹುನಿರೀಕ್ಷಿತ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಸೀಸನ್-3 ಇಂದಿನಿಂದ (ಫೆ.14) ಶುರುವಾಗಲಿದೆ. ವಡೋದರಲ್ಲಿ ನಡೆಯಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲೂ ಒಟ್ಟು 5 ತಂಡಗಳು ಕಣಕ್ಕಿಳಿಯಲಿದ್ದು, ಈ ತಂಡಗಳ ನಡುವಣ ಕದನಕ್ಕೆ ವೇದಿಕೆ ಸಿದ್ದವಾಗಿದೆ.

ಯಾವ ಚಾನೆಲ್ನಲ್ಲಿ ನೇರ ಪ್ರಸಾರ? ವುಮೆನ್ಸ್ ಪ್ರೀಮಿಯರ್ ಲೀಗ್ನ ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್ 18 ಚಾನೆಲ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ ಹಾಗೂ ವೆಬ್ಸೈಟ್ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ. ಇನ್ನು ಈ ಟೂರ್ನಿಯ ಎಲ್ಲಾ ಪಂದ್ಯಗಳು ರಾತ್ರಿ 7.30 ಕ್ಕೆ ಶುರುವಾಗಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ವೇಳಾಪಟ್ಟಿ ವಿವಿರ ಇಂತಿದೆ :
ಫೆ.14: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಗುಜರಾತ್ ಜೈಂಟ್ಸ್ (ವಡೋದರಾ)
ಫೆ.15: ಮುಂಬೈ ಇಂಡಿಯನ್ಸ್ VS ಡೆಲ್ಲಿ ಕ್ಯಾಪಿಟಲ್ಸ್ (ವಡೋದರಾ)
ಫೆ.16: ಗುಜರಾತ್ ಜೈಂಟ್ಸ್ Vs ಯುಪಿ ವಾರಿಯರ್ಸ್ (ವಡೋದರಾ)
ಫೆ.17: ಡೆಲ್ಲಿ ಕ್ಯಾಪಿಟಲ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಡೋದರಾ)
ಫೆ.18: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ (ವಡೋದರಾ)
ಫೆ.19: ಯುಪಿ ವಾರಿಯರ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ (ವಡೋದರಾ)
ಫೆ.21: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಮುಂಬೈ ಇಂಡಿಯನ್ಸ್ (ಬೆಂಗಳೂರು)
ಫೆ.22: ಡೆಲ್ಲಿ ಕ್ಯಾಪಿಟಲ್ಸ್ VS ಯುಪಿ ವಾರಿಯರ್ಸ್ (ಬೆಂಗಳೂರು)
ಫೆ.24: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಯುಪಿ ವಾರಿಯರ್ಸ್ (ಬೆಂಗಳೂರು)
ಫೆ.25: ಡೆಲ್ಲಿ ಕ್ಯಾಪಿಟಲ್ಸ್ Vs ಗುಜರಾತ್ ಜೈಂಟ್ಸ್ (ಬೆಂಗಳೂರು)
ಫೆ.26: ಮುಂಬೈ ಇಂಡಿಯನ್ಸ್ VS ಯುಪಿ ವಾರಿಯರ್ಸ್ (ಬೆಂಗಳೂರು)
ಫೆ.27: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಗುಜರಾತ್ ಜೈಂಟ್ಸ್ (ಬೆಂಗಳೂರು)
ಫೆ.28: ಡೆಲ್ಲಿ ಕ್ಯಾಪಿಟಲ್ಸ್ VS ಮುಂಬೈ ಇಂಡಿಯನ್ಸ್ (ಬೆಂಗಳೂರು)
ಮಾ.1: ಡೆಲ್ಲಿ ಕ್ಯಾಪಿಟಲ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬೆಂಗಳೂರು)
ಮಾ.3: ಗುಜರಾತ್ ಜೈಂಟ್ಸ್ Vs ಯುಪಿ ವಾರಿಯರ್ಸ್ (ಲಕ್ಷ್ಮೀ)
ಮಾ.6: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ (ಲಕ್ಷ್ಮಿ)
ಮಾ.7: ಗುಜರಾತ್ ಜೈಂಟ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ (ಲಕ್ಷ್ಮೀ)
ಮಾ.8: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಯುಪಿ ವಾರಿಯರ್ಸ್ (ಲಕ್ಷ್ಮೀ)
ಮಾ.10: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ (ಮುಂಬೈ)
ಮಾ.11: ಮುಂಬೈ ಇಂಡಿಯನ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು (ಮುಂಬೈ)
ಮಾ.13: ಎಲಿಮಿನೇಟರ್ (ಮುಂಬೈ)
ಮಾ.15: ಫೈನಲ್ಸ್ (ಮುಂಬೈ)









