ಬೆಂಗಳೂರು : ಮೆಟ್ರೋ ಪ್ರಯಾಣಿಕರ ಆಕ್ರೋಶಕ್ಕೆ BMRCL ಕೊನೆಗೂ ಮಣಿದಿದೆ. ಟಿಕೆಟ್ ದರ ದುಪ್ಪಟ್ಟು ಮಾಡಿ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದ ‘ನಮ್ಮ ಮೆಟ್ರೋ’, ಇಂದಿನಿಂದ ಹೊಸ ದರ ಜಾರಿ ಮಾಡಿದೆ. ಪ್ರಯಾಣಿಕರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಬಿಎಂಆರ್ಸಿಎಲ್, ಶೇ 90ರಿಂದ 100ರಷ್ಟು ದರ ಹೆಚ್ಚಳ ಮಾಡಿರುವ ನಿಲ್ದಾಣಗಳ ಮಧ್ಯೆ ತುಸು ದರವನ್ನು ಇಳಿಕೆ ಮಾಡಿದೆ.
ಪರಿಷ್ಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಬಿಎಂಆರ್ಸಿಎಲ್ ಗುರುವಾರ ತಿಳಿಸಿತ್ತು. ಈವರಗೆ ಪರಿಷ್ಕೃತ ದರ ಪಟ್ಟಿ ಮೆಟ್ರೋದ ಅಧಿಕೃತ ವೆಬ್ಸೈಟ್ನಲ್ಲಾಗಲೀ ಎಕ್ಸ್ ತಾಣದಲ್ಲಾಗಲೀ ಪ್ರಕಟವಾಗಿಲ್ಲ. ಆದರೆ, ಪ್ರಯಾಣ ದರದಲ್ಲಿ ತುಸು ಇಳಿಕೆ ಇಂದಿನಿಂದಲೇ (ಶುಕ್ರವಾರ) ಜಾರಿಗೆ ಬಂದಿದೆ. ಇಂದು ಬೆಳಗ್ಗೆಯಿಂದ ಮೆಟ್ರೋದಲ್ಲಿ ಪ್ರಯಾಣಿಸಿದವರಿಗೆ ಹೊಸ ದರ ಅನ್ವಯ ಆಗಿದೆ.
ಪರಿಷ್ಕೃತ ದರ :
ಮೆಜೆಸ್ಟಿಕ್ To ಬೈಯಪ್ಪನಹಳ್ಳಿ
- ಏರಿಕೆಯಾಗಿದ್ದ ದರ: 60 ರೂಪಾಯಿ
- ಪರಿಷ್ಕೃತ ದರ: 50 ರೂಪಾಯಿ
ಮೆಜೆಸ್ಟಿಕ್ To ಸಿಲ್ಕ್ ಇನ್ಸ್ಟಿಟ್ಯೂಟ್
- ಏರಿಕೆಯಾಗಿದ್ದ ದರ: 70 ರೂಪಾಯಿ
- ಪರಿಷ್ಕೃತ ದರ: 60 ರೂಪಾಯಿ
ಮೆಜೆಸ್ಟಿಕ್ To ವೈಟ್ ಫೀಲ್ಡ್
- ಏರಿಕೆಯಾಗಿದ್ದ ದರ: 90 ರೂಪಾಯಿ
- ಪರಿಷ್ಕೃತ ದರ: 80 ರೂಪಾಯಿ
ಮೆಜೆಸ್ಟಿಕ್ To ಚಲ್ಲಘಟ್ಟ
- ಏರಿಕೆಯಾಗಿದ್ದ ದರ: 70 ರೂಪಾಯಿ
- ಪರಿಷ್ಕೃತ ದರ: 60 ರೂಪಾಯಿ
ಮೆಜೆಸ್ಟಿಕ್ To ರೇಷ್ಮೆ ಸಂಸ್ಥೆ
- ಏರಿಕೆಯಾಗಿದ್ದು 70 ರೂಪಾಯಿ
- ಇಳಿಕೆಯಾಗಿದ್ದು 60 ರೂಪಾಯಿಗೆ
ಮೆಜೆಸ್ಟಿಕ್ To ವಿಧಾನಸೌಧ
- ಏರಿಕೆಯಾಗಿದ್ದ ದರ: 20
- ಪರಿಷ್ಕೃತ ದರ: 10 ರೂಪಾಯಿ


ಮೆಟ್ರೋ ದರ ಏರಿಕೆ ವಿಷಯದಲ್ಲಿ ಮರುಪರಿಶೀಲನೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟ ಬೆನ್ನಲ್ಲೇ ಗುರುವಾರ ಸುದ್ದಿಗೋಷ್ಠಿ ನಡೆಸಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಮಹೇಶ್ವರ್ ರಾವ್ ದುಪ್ಪಟ್ಟು ದರ ಏರಿಕೆ ಆದ ಕಡೆ ಹಂತ ಹಂತವಾಗಿ ಮರ್ಜ್ ಮಾಡುವ ಮೂಲಕ ದರ ಕಡಿಮೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಗರಿಷ್ಠ ಹಾಗೂ ಕನಿಷ್ಠ ದರದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದಿದ್ದರು. ಅದರಂತೆ ‘‘ಕನಿಷ್ಠ ದರ 10 ರೂ., ಗರಿಷ್ಠ ದರ 90 ರೂ. ಯಥಾಸ್ಥಿತಿ ಮುಂದುವರಿಯಲಿದೆ.









