ನೆಲಮಂಗಲ ನಗರಸಭೆ ಎಲೆಕ್ಷನ್ : ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಎನ್.ಗಣೇಶ್ ಅಧ್ಯಕ್ಷರಾಗಿ ಆಯ್ಕೆ!

ನೆಲಮಂಗಲ : ನೆಲಮಂಗಲ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸದಸ್ಯರಿಗೆ ವಿಪ್ ಜಾರಿ ನಡುವೆಯೂ ಅಡ್ಡ ಮತದಾನ ನಡೆದಿದೆ. ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಎನ್.ಗಣೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಜಯಗಳಿಸಿದ್ದ ಎನ್.ಗಣೇಶ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, 18 ಮತಗಳಿಂದ ನೆಲಮಂಗಲ ನಗರಸಭೆಯ ಅಧ್ಯಕ್ಷರಾಗಿ ಎನ್.ಗಣೇಶ್ ಹಾಗೂ ಉಪಾಧ್ಯಕ್ಷರಾಗಿ ಆನಂದ್ ಆಯ್ಕೆಯಾಗಿದ್ದಾರೆ.

ಎನ್.ಡಿ.ಎ. ಮೈತ್ರಿ ಕೂಟಕ್ಕೆ ಬಾರಿ ಮುಖಭಂಗವಾಗಿದ್ದು, ವಿಪ್ ಜಾರಿ ನಡುವೆಯೂ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಿಗೆ ಜೆಡಿಎಸ್ ಸದಸ್ಯರು ಮತದಾನ ಮಾಡಿರೋದು ಮೈತ್ರಿ ಕೂಟಕ್ಕೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಇದನ್ನೂ ಓದಿ : http://ಮಹಾಕುಂಭದಲ್ಲಿ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಪೋಸ್ಟರ್ ಹಿಡಿದು ಮಡೆನೂರ್ ಮನು ಪುಣ್ಯಸ್ನಾನ!

Btv Kannada
Author: Btv Kannada

Leave a Comment

Read More

Read More

12:41