ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರ ಲವ್ವಿ-ಡವ್ವಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಗ್ನೇಯ ವಿಭಾಗ ಸೆನ್ ACP ಗೋವರ್ಧನ್ ಹಾಗೂ ACP ಅಶ್ವಿನಿ ಪ್ರೇಮ ಪುರಾಣ ಬಹಿರಂಗವಾಗಿದ್ದು, ಈ ಇಬ್ಬರಿಗೂ ಬೇರೆ ಬೇರೆ ಮದ್ವೆಯಾಗಿದ್ರು ಕೂಡ ಲವ್ವಲ್ಲಿ ಬಿದ್ದ ಇವರ ವಿರುದ್ದ ACP ಗೋವರ್ಧನ್ ಪತ್ನಿ ದೂರು ನೀಡಿದ್ದಾರೆ. ದೂರಿನನ್ವಯ ಹೈಗ್ರೌಂಡ್ ಠಾಣೆಯಲ್ಲಿ FIR ದಾಖಲಾಗಿದೆ.

2022ರಿಂದ ACP ಗೋವರ್ಧನ್, ACP ಅಶ್ವಿನಿ ಮಧ್ಯೆ ಪ್ರೀತಿ ಶುರುವಾಗಿತ್ತು. ಗೋವರ್ಧನ್ ಸ್ನಾನ ಮಾಡ್ತಿದ್ಧಾಗ್ಲೂ ಅಶ್ವಿನಿ ಕರೆ ಮಾಡ್ತಿದ್ದರಂತೆ. ಈ ಕುರಿತು ಗೋವರ್ಧನ್ ಪತ್ನಿಗೆ ಡೌಟ್ ಬಂದು ಪ್ರಶ್ನಿಸಿದಾಗ ಇಬ್ಬರ ಪ್ರೇಮ ಪುರಾಣ ಬಟಾಬಯಲಾಗಿದೆ.

ಇನ್ನು ಶಿವಮೊಗ್ಗದಲ್ಲಿ ಬಂದೋಬಸ್ತ್ಗೆ ಹೋಗಿದ್ದಾಗ ಇಬ್ಬರು ACPಗಳ ರಿಲೇಷನ್ಶಿಪ್ ಜೋರಾಗಿತ್ತು. ಅದಾದ ಬಳಿಕ ACP ಗೋವರ್ಧನ್ ಪತ್ನಿಗೆ ದೈಹಿಕ ಹಿಂಸೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬೆಳವಣೆಗೆ ಬಳಿಕ ಹಿರಿಯರ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾಡಲು ಯತ್ನಗಳು ನಡೆದಿದ್ದವು. ಆಗ ಸಂತ್ರಸ್ಥೆ ಪತ್ನಿ ಮತ್ತು ಮಗುವನ್ನು ನೋಡಿಕೊಳ್ಳುವ ಭರವಸೆಯನ್ನು ಗೋವರ್ಧನ್ ನೀಡಿದ್ದರು.


ಗೋವರ್ಧನ್ ಪತ್ನಿ ಇಷ್ಟೆಲ್ಲ ನಡೆದ ಬಳಿಕ ಡಿಜಿಗೆ ದೂರು ನೀಡಿ ಪತಿಯನ್ನು ಚಿತ್ರದುರ್ಗಕ್ಕೆ ಟ್ರಾನ್ಸ್ಫರ್ ಮಾಡಿಸಿದ್ದರು. ಚಿತ್ರದುರ್ಗಕ್ಕೆ ಟ್ರಾನ್ಸ್ಫರ್ ಆದ್ಮೇಲೂ ಅಶ್ವಿನಿ ಜೊತೆ ಗೋವರ್ಧನ್ ಡಿಂಗ್ ಡಾಂಗ್ ಶುರು ಮಾಡಿಕೊಂಡಿದ್ದ.

ಇತ್ತೀಚೆಗೆ ಮೊಬೈಲ್ ಚಾಟ್ನಲ್ಲಿ ಗೋವರ್ಧನ್-ಅಶ್ವಿನಿ ಕ್ರಿಮಿನಲ್ ಪ್ಲಾನ್ ಬಯಲಾಗಿದೆ. ಬೆಂಕಿ ಹಚ್ಚಿ ಪತ್ನಿಯನ್ನೇ ಮುಗಿಸಲು ಗೋವರ್ಧನ್ ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಈಗಾಗಲೇ ಮದ್ವೆಯಾಗಿ 4 ವರ್ಷದ ಮಗಳನ್ನು ಹೊಂದಿರೋ ಅಶ್ವಿನಿ, ನಾವು ಮದ್ವೆಯಾಗ್ತೇವೆ, ನೀನು ಡೈವೋರ್ಸ್ ಕೊಡು ಎಂದು ಗೋವರ್ಧನ್ ಪತ್ನಿಗೆ ಹೇಳಿದ್ದಳು. BTM ಲೇಔಟ್ನಲ್ಲಿ ಪತ್ನಿಯ ಮುಂದೆಯೇ ರತಿಕ್ರೀಡೆಗೆ ACP ಜೋಡಿ ಇಳಿದಿತ್ತು. ಸುಳ್ಳು ಕೇಸ್ ಹಾಕಿಸಿ ರೌಡಿಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆಯನ್ನು ಹಾಕಿದ್ದರು.

ಈ ಎಲ್ಲವುದರ ಬಗ್ಗೆ, 3 ವರ್ಷಗಳಿಂದ ಸಹಿಸಿದ ಹಿಂಸಾಚಾರವನ್ನು ಎಳೆಎಳೆಯಾಗಿ FIRನಲ್ಲಿ ಗೋವರ್ಧನ್ ಪತ್ನಿ ಬಿಚ್ಚಿಟ್ಟಿದ್ದಾರೆ. ಇದೀಗ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
