ನಟ ಡಾಲಿ ಧನಂಜಯ್ ಇದೇ ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ. ಹೀಗಾಗಿ ಅವರ ಹುಟ್ಟೂರಾದ ಅರಸಿಕೆರೆಯ ಕಾಳೇನ ಹಳ್ಳಿಯಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿದ್ದು, ಒಂದೊಂದೆ ಕಾರ್ಯಗಳನ್ನು ಮಾಡಲಾಗುತ್ತಿದೆ.

ಧನಂಜಯ್ ತಮ್ಮ ಕುಟುಂಬದ ಸಂಪ್ರದಾಯದಂತೆ ಮೊದಲು ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೆಂಡ ತುಳಿದಿದ್ದಾರೆ. ಅದಕ್ಕೂ ಮುನ್ನ ದೇವಸ್ಥಾನನಕ್ಕೆ ಕುಟುಂಬಸ್ಥರು ಹಾಗೂ ಊರಿಗೂ ಮಧುಮಗನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬಂದರು. ಬಳಿಕ ಡಾಲಿ ಮನೆಯಲ್ಲಿ ಮನೆದೇವರ ಪೂಜೆ ನೆರವೇರಿಸಿದರು. ಈ ವೇಳೆ ಧನಂಜಯ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಮದುವೆಯ ಬ್ಯುಸಿಯಲ್ಲಿದ್ದರೂ ಡಾಲಿ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಕೊಪ್ಪಲಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮೂರಿನ ಶಾಲೆಗೆ ಧನಂಜಯ್ ಮೂಲಭೂತ ಸೌಕರ್ಯವನ್ನು ಕಲ್ಪಿಸಿದ್ದಾರೆ. ಅವರ ಮದುವೆ ಸಂಭ್ರಮದ ಪ್ರಯುಕ್ತ ಶಾಲೆಗೂ ದೀಪಾಲಂಕಾರ ಮಾಡಿಸಲಾಗಿದೆ.
ಇದನ್ನೂ ಓದಿ : http://ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಮರಕ್ಕೆ ಡಿಕ್ಕಿ – 20ಕ್ಕೂ ಹೆಚ್ಚು ಮಂದಿಗೆ ಗಾಯ!
