CDR ಕೇಸ್ ವಿಚಾರಣೆಗೆ ಇಂದು ಐಶ್ವರ್ಯ ಗೌಡ ಹಾಜರ್​… ಪೊಲೀಸ್ ಇನ್‌ಸ್ಪೆಕ್ಟ್​​ರ್​ಗಳಿಗೆ ಢವಢವ!

ಬೆಂಗಳೂರು : ಅಕ್ರಮವಾಗಿ ಹಲವು ವ್ಯಕ್ತಿಗಳ ಫೋನ್ ಕರೆ ದಾಖಲೆಗಳನ್ನು (ಸಿಡಿಆರ್) ಪಡೆದುಕೊಂಡಿರುವ ಆರೋಪ ಎದುರಿಸುತ್ತಿರುವ ಐಶ್ವರ್ಯ ಗೌಡಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ನೋಟಿಸ್ ನೀಡಿದ್ದರು. ಅದರಂತೆ ಇಂದು (ಫೆ.13)ರಂದು ಎಸಿಪಿ ಚಂದನ್ ಅವರ ಮುಂದೆ ಐಶ್ವರ್ಯಾ ಗೌಡ ವಿಚಾರಣೆಗೆ ಹಾಜರಾಗಲಿದ್ದಾರೆ.

ಐಶ್ವರ್ಯ ಗೌಡ 2022 ಮಾರ್ಚ್​ನಿಂದ 2024ರ ನವೆಂಬರ್ ವರೆಗೂ ಅಕ್ರಮವಾಗಿ ಹಲವರ ಸಿಡಿಆರ್ ಪಡೆದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿ ದೂರು ದಾಖಲಿಸಿದ್ದರು.

ಎಸಿಪಿ ಭರತ್ ರೆಡ್ಡಿ ದಾಖಲಿಸಿರೋ ದೂರಿನ ತನಿಖೆಯನ್ನು ಎಸಿಪಿ ಚಂದನ್ ಅವರು ನಡೆಸ್ತಿದ್ದು, ಇಂದು ಐಶ್ವರ್ಯ ಗೌಡಳ ವಿಚಾರಣೆ ಮಾಡಲಿದ್ದಾರೆ. ಈ ಬೆನ್ನಲ್ಲೇ ಹಲವು ಪೊಲೀಸ್ ಇನ್‌ಸ್ಪೆಕ್ಟ್​​ರ್​ಗಳಿಗೆ ನಡುಕ ಶುರುವಾಗಿದೆ. ಸಿಡಿಆರ್ ತೆಗೆದುಕೊಟ್ಟಿದ್ದ ಅಧಿಕಾರಿಗಳಿಗೆ ಇಲಾಖೆಯಿಂದ ಕಠಿಣ ಕ್ರಮವಾಗುವ ಭಯ ಶುರುವಾಗಿದೆ.

ಹಿನ್ನೆಲೆ : ಐಶ್ವರ್ಯ ಗೌಡಳ 5 ಹಾಗೂ ಅವರ ಪತಿಯ 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಅವುಗಳಲ್ಲಿದ್ದ ಡೇಟಾ ಸಂಗ್ರಹಣೆಗಾಗಿ ನ್ಯಾಯಾಲಯದ ಅನುಮತಿ ಪಡೆದು ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ರವಾನಿಸಿದ್ದರು. ಆ ಫೋನ್‌ಗಳಲ್ಲಿರುವ ಡೇಟಾವನ್ನು ಸಂಗ್ರಹಿಸಿದಾಗ ಅದರಲ್ಲಿ ಹಲವು ವ್ಯಕ್ತಿಗಳ ಫೋನ್ ಕರೆ ದಾಖಲೆಗಳು (ಸಿಡಿಆರ್) ಪತ್ತೆಯಾಗಿದ್ದವು.

Btv Kannada
Author: Btv Kannada

Leave a Comment

Read More

Read More

12:32