ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ – ನಕಲಿ ಡಿವೈಎಸ್‌ಪಿ ವಿರುದ್ಧ FIR!

ಬೆಂಗಳೂರು : ಲೋಕಾಯುಕ್ತ ಡಿವೈಎಸ್​ಪಿ ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಹಾಗೂ ಬೆದರಿಸಿ ಹಣಕ್ಕೆ ಡಿಮ್ಯಾಂಡ್​ ಮಾಡಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಲೋಕಾಯುಕ್ತ ಡಿವೈಎಸ್​ಪಿ ಬಸವರಾಜು ಆರ್. ಮಗದಮ್ ದೂರು ದಾಖಲಿಸಿದ್ದು, ಸದ್ಯ ನಕಲಿ ಡಿವೈಎಸ್​ಪಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಲೋಕಾಯುಕ್ತ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ಕರೆ : ಅಪರಿಚಿತ ನಂಬರ್​ನಿಂದ ಕಾಲ್​ ಮಾಡಿದ ವ್ಯಕ್ತಿಯೋರ್ವ, ನಾನು ಲೋಕಾಯುಕ್ತ ಡಿವೈಎಸ್​ಪಿ ಎಂದು ಪರಿಚಯ ಮಾಡಿಕೊಂಡ ಬಳಿಕ ನಿಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್ ದಾಖಲಾಗುತ್ತಿದೆ ಎಂದು ಬೆದರಿಸಿ, ನಿಮ್ಮ ಮೇಲೆ ಕೇಸ್ ಹಾಕಬಾರದು ಅಂದ್ರೆ ಹಣ ನೀಡಿ ಅಂತ ಡಿಮ್ಯಾಂಡ್ ಮಾಡಿದ್ದ.

ಅನುಮಾನ ಬಂದು ಸರ್ಕಾರಿ ಅಧಿಕಾರಿಗಳು ಟ್ರೂ ಕಾಲರ್​ನಲ್ಲಿ ಚೆಕ್ ಮಾಡಿದಾಗ ಲೋಕಾಯುಕ್ತ ಡಿವೈಎಸ್​ಪಿ ಅಂತಲೇ ಹೆಸರು ಬಂದಿದ್ದು, ಹಲವು ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಸದ್ಯ ಎಚ್ಚೆತ್ತ ಲೋಕಾಯುಕ್ತ ಪೊಲೀಸರು, ಆ ನಂಬರ್​ನ ಲೋಕೇಷನ್ ಟ್ರೆಸ್ ಮಾಡಿದ್ದಾರೆ. ನಂಬರ್ ಲೋಕೇಷನ್​ ಮಹಾರಾಷ್ಟ್ರದ ಶೀರೋಲ್ ಎಂಬುದು ಗೊತ್ತಾಗಿದೆ. ಸದ್ಯ ಪ್ರಕರಣದ ತನಿಖೆ ಮುಂದುವರೆದಿದೆ.

Btv Kannada
Author: Btv Kannada

Leave a Comment

Read More