ಶಿವಮೊಗ್ಗ : ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದೆ. ಇದೀಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಅಶ್ಲೀಲವಾಗಿ ನಿಂದಿಸಿರುವ ಬಸವೇಶ್ ವಿರುದ್ಧ FIR ದಾಖಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ನೀಡಿದ ದೂರಿನ ಮೇರೆಗೆ ಬಸವೇಶ್ ವಿರುದ್ಧ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಳೇನಗರ ಠಾಣೆಯಲ್ಲಿ ಬಿಎನ್ಎಸ್ 132, 352, 351/2, 189/2,190 BNS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇನ್ನು FIR ದಾಖಲಾಗುತ್ತಿದ್ದಂತೆಯೇ ಭದ್ರಾವತಿ ಡಿವೈಎಸ್ಪಿ ನಾಗರಾಜ್ ನೇತೃತ್ವ ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಅಜಯ್, ಚನ್ನಗಿರಿ ರಸ್ತೆ ಬಳಿ ರವಿ ಹಾಗೂ ವರುಣ್ ಎನ್ನುವರನ್ನ ಅರೆಸ್ಟ್ ಮಾಡಿದ್ದಾರೆ.
ಪ್ರಕರಣ : ಅಕ್ರಮ ಮರಳು ಗಣಿಗಾರಿಕೆ ಜಾಗದ ಮೇಲೆ ತಡರಾತ್ರಿ ರೇಡ್ ನಡೆಸಿದ ವೇಳೆ ಘಟನೆ ನಡೆದಿದೆ. ಈ ಮಹಿಳಾ ಅಧಿಕಾರಿಯು ಭದ್ರಾವತಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬಿ.ಕೆ.ಸಂಗಮೇಶ್ ಪುತ್ರನ ತಮ್ಮ ಆಪ್ತನೊಂದಿಗೆ ಮಾತನಾಡುತ್ತ ಮತ್ತು ಭೂ ವಿಜ್ಞಾನ ಮಹಿಳಾ ಅಧಿಕಾರಿಗೆ ಅಶ್ಲೀಲ ಪದಗಳಲ್ಲಿ ನಿಂದಿಸಿದ್ದಾರೆ. ಮಹಿಳಾ ಅಧಿಕಾರಿಯ ಮೇಲೆ MLA ಮಗನ ದರ್ಪದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ : http://‘ಸೀಟ್ ಎಡ್ಜ್’ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್.. ರವೀಕ್ಷಾ ಜೊತೆ ರೊಮ್ಯಾಂಟಿಕ್ ಮೂಡ್ನಲ್ಲಿ ಸಿದ್ದು ಮೂಲಿಮನಿ!









